ನಟನೆ, ಡ್ಯಾನ್ಸಿಂಗ್ ಅಪಾರ ಅಭಿಮಾನಿಗಳ ಮನಗೆದ್ದಿರುವ ಸಾಯಿ ಪಲ್ಲವಿ (Sai Pallavi) ಇದೀಗ ಎರಡು ವರ್ಷಗಳ ನಂತರ ಬೆಳ್ಳಿಪರದೆಗೆ ಮರಳಿದ್ದಾರೆ. ‘ಅಮರನ್’ (Amaran) ಚಿತ್ರದ ಮೂಲಕ ಮತ್ತೆ ನಟಿ ಸದ್ದು ಮಾಡುತ್ತಿದ್ದಾರೆ. ನಟಿಯ ಕ್ಯಾರೆಕ್ಟರ್ ಟೀಸರ್ ರಿವೀಲ್ ಚಿತ್ರತಂಡ ಸರ್ಪ್ರೈಸ್ ನೀಡಿದೆ. ಇದನ್ನೂ ಓದಿ:10 ವರ್ಷ ಕಾಲ ಮ್ಯೂಸಿಕ್ ವಾಹಿನಿ ನಡೆದಿದ್ದೇ ಸಂತೋಷ, ಆಶ್ಚರ್ಯ: ಹೆಚ್ ಆರ್ ರಂಗನಾಥ್
ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಆಗಿ ನಟಿಸಿದ್ದಾರೆ. ವೀರಯೋಧ ಮೇಜರ್ ಮುಕುಂದ ವರದರಾಜನ್ ಬಯೋಪಿಕ್ ಆಗಿದೆ. ಇದರಲ್ಲಿ ವೀರಯೋಧನಾಗಿ ಶಿವಕಾರ್ತಿಕೇಯನ್ ನಟಿಸಿದ್ರೆ, ಅವರ ಪತ್ನಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ.
View this post on Instagram
ಇನ್ನೂ ಚಿತ್ರದಲ್ಲಿ ನಟಿಯ ಕ್ಯಾರೆಕ್ಟರ್ ಟೀಸರ್ 1:22 ನಿಮಿಷವಿದ್ದು, ಸಾಯಿ ಪಲ್ಲವಿ ಗುಂಗುರು ಕೂದಲು ಬಿಟ್ಟು ನಯಾ ಲುಕ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ‘ಅಮರನ್’ ಚಿತ್ರವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ.