ಬೆಂಗಳೂರು: ಡೆತ್‍ನೋಟ್‍ನಲ್ಲಿ ಪತ್ನಿ, ಮಗನಿಗೆ ಕ್ಷಮೆ ಕೇಳಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಕಬಡ್ಡಿ ಕೋಚ್ ಒಬ್ಬರು ದಾವಣಗೆರೆ ಜಿಲ್ಲೆಯ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರುದ್ರಪ್ಪ ವಿ ಹೊಸಮನಿ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಕಬಡ್ಡಿ ಕೋಚ್. ಆಟಗಾರ್ತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ ರುದ್ರಪ್ಪ ಹೊಸಮನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ದಾವಣಗೆರೆಯ ಹರಿಹರ ನಗರದ ಎಸ್.ಎಂ.ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮೂರು ದಿನಗಳ ಹಿಂದೆಯೇ ನೇಣು ಹಾಕಿಕೊಂಡಿದ್ದು, ಸೋಮವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಏನಿದು ಪ್ರಕರಣ?:
ರುದ್ರಪ್ಪ ಅವರು ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಕೋಚ್ ಆಗಿದ್ದರು. ರೂಮ್‍ನಲ್ಲಿ ಆಟಗಾರ್ತಿಯರು ಬಟ್ಟೆ ಬದಲಿಸುವಾಗ ಇಣುಕಿ ನೋಡಿದ್ದರು ಎನ್ನುವ ಆರೋಪವನ್ನು ರುದ್ರಪ್ಪ ಎದುರಿಸುತ್ತಿದ್ದರು. ಜೊತೆಗೆ ಅಸಭ್ಯ ವರ್ತನೆಯಡಿ ರುದ್ರಪ್ಪ ಅವರ ವಿರುದ್ಧ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
ಸಾಯಿ ರುದ್ರಪ್ಪ ಅವರನ್ನು ಅಮಾನತು ಮಾಡಿ, ದೆಹಲಿ ಕಚೇರಿಗೆ ಹೋಗುವಂತೆ ಆದೇಶ ನೀಡಿತ್ತು. ಅವಮಾನಕ್ಕೆ ಒಳಗಾಗಿದ್ದ ಮನೆಯಲ್ಲಿ ದೆಹಲಿಗೆ ಹೋಗುವುದಾಗಿ ಹೇಳಿ ಹರಿಹರಕ್ಕೆ ಬಂದಿದ್ದರು. ಮೂರು ದಿನಗಳ ಹಿಂದೆ ಎಂ.ಎಸ್.ಲಾಡ್ಜ್ ನಲ್ಲಿ ರೂಂ ಮಾಡಿಕೊಂಡಿ ರುದ್ರಪ್ಪ ಅವರು, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಡೆತ್ ನೋಟ್‍ನಲ್ಲಿ ಏನಿದೆ?:
ದೇವಿಕಾ, ರಾಕೇಶ್ ನನ್ನ ಕ್ಷಮಿಸಿ. ನಿಮಗೆ ಬಹಳ ತೊಂದರೆ ಕೊಟ್ಟುಬಿಟ್ಟೆ. ನಿಮ್ಮನ್ನ ನೋಡಬೇಕು ಅನಿಸಿತ್ತು. ನನ್ನ ಬಳಿ ಮೊಬೈಲ್ ಇಲ್ಲ, ಪರ್ಸ್ ನಲ್ಲಿ ನಿಮ್ಮಬ್ಬರ ಫೋಟೋ ಕೂಡಾ ಇಲ್ಲದಾಗಿದೆ.
ರಾಕೇಶ್ ಅಮ್ಮನನ್ನು ಕಾಳಜಿ ತಗೆದುಕೋ, ನಿನ್ನ ಕೆಲಸದಲ್ಲಿ ಇನ್ನೂ ವೇಗವಾಗಿ ಧನ್ಯನಾಗಿ, ಮುಂದುವರಿ. ದೇವರು ಒಳ್ಳೆಯದನ್ನು ಮಾಡುತ್ತಾನೆ. ನನ್ನ ಆತ್ಮೀಯ ಬಂಧುಗಳಿಗೆ ಹಾಗೂ ಎಲ್ಲ ಗೆಳೆಯರಿಗೆ ಧನ್ಯವಾದಗಳು. ನನ್ನಿಂದ ತೊಂದರೆ ಆಗಿದ್ದರೆ ಕ್ಷಮಿಸಿ, ನನ್ನ ದೇಹವನ್ನು ಯಾವುದಾದರು ಆಸ್ಪತ್ರೆಗೆ ದಾನ ಮಾಡಿ ಅಂತಾ ಬರೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv