ದುಬೈ: ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಿನ ಏಷ್ಯಾಕಪ್ ಸೂಪರ್ 4 ಪಂದ್ಯ ಸ್ಲೆಡ್ಜಿಂಗ್‌ಗೆ (ಕೆಣಕುವ) ವೇದಿಕೆಯಾಗಿ ಮಾರ್ಪಟ್ಟಿದೆ.
ಭಾರತ ಬ್ಯಾಟಿಂಗ್ ವೇಳೆ ಅಭಿಷೇಕ್ ಶರ್ಮಾ (Abhishek Sharma) ಹಾಗೂ ಪಾಕಿಸ್ತಾನದ ಹ್ಯಾರಿಸ್ ರೌಫ್ ವಾಗ್ವಾದ ನಡೆಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಬ್ಯಾಟಿಂಗ್ ವೇಳೆ ಶಾಹೀಬ್‌ಜಾದ್ ಫರ್ಹಾನ್ (Sahibzada Farhan) ಫಿಫ್ಟಿ ಬಾರಿಸಿದ ನಂತರ ಮಾಡಿದ ಸಂಭ್ರಮಾಚರಣೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
This is how sahibzada farhan celebrated his half century, signifying his bat as Ak 47 and pointing it towards Indian Dug out.
Modi ji if this is not an act of war, what is ?
Stop this match and attack pakistan asap or else resign.
— Jitesh (@Chaotic_mind99) September 21, 2025
ಫರ್ಹಾನ್‌ನ ಈ ಸೆಲೆಬ್ರೇಷನ್ ಪಹಲ್ಗಾಮ್ ಉಗ್ರರು (Pahalgam Terrorist) ನಡೆಸಿದ ದಾಳಿಯ ಸಂತ್ರಸ್ತರು ಸೇರಿ ಸಮಸ್ತ ಭಾರತೀಯರನ್ನು ಅಣಕಿಸಿದ್ರಾ ಅನ್ನೋ ಅನುಮಾನ ಕಾಡತೊಡಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆಯಾಗುತ್ತಿದೆ.
ವಿವಾದದ ಕಿಡಿ ಹಚ್ಚಿದ ಗನ್ ಸೆಲಬ್ರೇಷನ್
ಭಾರತ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಹೀಬ್‌ಜಾದ್ ಫರ್ಹಾನ್ ಉತ್ತಮ ಆರಂಭ ನೀಡಿದ್ದರು. ಅಬ್ಬರಿಸಿದ ಶಾಹೀಬ್‌ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹಾಫ್ ಸೆಂಚುರಿ ಸಂಭ್ರಮವನ್ನು ಶಾಹೀಬ್‌ಜಾದ್ ಫರ್ಹಾನ್, ಭಾರತೀಯ ತಂಡದ ಡೌಗ್‌ಕಡೆ ಬ್ಯಾಟ್ ತೋರಿಸಿ ಗನ್ ಫೈರಿಂಗ್ ರೀತಿ ಸಂಭ್ರಮಿಸಿದರು. ಬ್ಯಾಟನ್ನೇ ಏಕೆ-47 ಗನ್ ರೀತಿ ತೋರಿಸಿ, ಫೈರಿಂಗ್ ಮಾಡಿದ ರೀತಿಯಲ್ಲಿ ಸಂಭ್ರಮಿಸಿದರು. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
Pakistan Star Sahibzada Farhan Makes Explosive ‘Gun-Firing’ Celebration After Smashing Fifty vs India pic.twitter.com/jFtI5TqWwc
— The Nawakadal (@thenawakadal) September 21, 2025
ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಪಹಲ್ಗಾಮ್ ಉಗ್ರರಿಗೆ ಹೋಲಿಸಿದ್ದಾರೆ. ಆರಂಭದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಫರ್ಹಾನ್ 45 ಎಸೆತಗಳಲ್ಲಿ 58 ರನ್ ಗಳಿಸಿದರು.