ಬಾಗಲಕೋಟೆ: ಜಿಲ್ಲೆಯ ಸಹನಾ ಶಿವಪುತ್ರಪ್ಪ ಅಂಗಡಿ ಅಗ್ನಿವೀರ್ (Agniveer) ಆಗಿ ನೌಕಾ ಸೇನೆಗೆ (Indian Navy) ಸೇರ್ಪಡೆಯಾಗಿದ್ದಾರೆ.
ಬಾಗಲಕೋಟೆ (Bagalkote) ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಸಹನಾ ಬಾದಾಮಿ ಪಟ್ಟಣದ ಚಾಲುಕ್ಯ ನಗರದ ನಿವಾಸಿ ನಿವೃತ್ತ ಯೋಧ ಶಿವಪುತ್ರಪ್ಪ ಅಂಗಡಿ ಇವರ ಪುತ್ರಿಯಾಗಿದ್ದಾರೆ.
ಓಡಿಶಾದಲ್ಲಿ ತರಬೇತಿ ಮುಗಿಸಿ ಇವರಿಗೆ ಮುಂಬೈನಲ್ಲಿ ಪೋಸ್ಟಿಂಗ್ ನೀಡಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಸರ್ಕಾರಿ ಸಾರಿಗೆ ಬಸ್ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ತಂದೆ ಶಿವಪುತ್ರಪ್ಪ ಅಂಗಡಿ ಸಿಆರ್‌ಪಿಎಫ್‌ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ ವಾಸವಾಗಿದ್ದಾರೆ.