ನಾನ್ಯಾರ ನಗುವನ್ನು ಕಿತ್ತುಕೊಂಡಿಲ್ಲ, ಅವರ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ: ಬೇಳೂರು ಗೋಪಾಲಕೃಷ್ಣ

Public TV
1 Min Read
Beluru Halappa F

ಬೆಂಗಳೂರು: ನಾನು ಹಾಲಪ್ಪರ ನಗುವನ್ನು ಕಿತ್ತುಕೊಂಡಿಲ್ಲ. ತಮ್ಮ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ. ನಾನು ಸಿಗಂಧೂರು ದೇವಿ ಪ್ರಸಾದ ಸ್ವೀಕರಿಸಿ ಆಣೆ ಮಾಡಲು ಸಿದ್ಧನಿದ್ದೇನೆ. ಆಣೆ ಮಾಡಲು ಅವರು ದೇವಿಯ ಸನ್ನಿಧಿಗೆ ಬರಲಿ. ಯಾರನ್ನು ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ ಅಂತ ಬೇಳೂರು ಗೋಪಾಲಕೃಷ್ಣ ಗೆಳೆಯ ಅವರು ಮಾಜಿ ಸಚಿವ ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಯಾರ ಮೇಲಾದ್ರೂ ಆಪಾದನೆ ಮಾಡಿದ್ರೆ ಜಿಲ್ಲೆ ಮತ್ತು ರಾಜ್ಯದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತೆ ಅಂತ ತಿಳಿದಿದ್ದರೆ ಅದು ತಪ್ಪಾಗುತ್ತದೆ. ನಾನು ಇವತ್ತು ಮುಂದೆಯೇ ಹೇಳುತ್ತೇನೆ ನನ್ನ ಮೇಲೆ ಆಪಾದನೆಗಳಿದ್ದರೆ ಪ್ರಸಾದ ಸ್ವೀಕರಿಸಿ ಪ್ರಮಾಣ ಮಾಡ್ತೇನೆ ಅಂದ್ರು. ಇದನ್ನೂ ಓದಿ: ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

Beluru Gopal Krishna

ಕ್ಷೇತ್ರದಲ್ಲಿ ಬೇಳೂರುದ್ದೇ ಆದ ಶಕ್ತಿ ಮತ್ತು ಸಂಘಟನೆ ಇದೆ. ಅದನ್ನು ನಾನು ಯಾರಿಂದ ಕಲಿತು ಬಂದಿದ್ದೇನೆ ಎಂಬುದು ನನಗೆ ಗೊತ್ತಿದೆ. ಹಾಲಪ್ಪ ಅವರು ನನ್ನ ಬಗ್ಗೆ ಏನಾದ್ರೂ ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ನನ್ನ ಬಗ್ಗೆ ಏನಾದ್ರೂ ಆರೋಪಗಳಿದ್ದರೆ ಕ್ಷೇತ್ರದ ಜನ ಹೇಳಿದ್ರೆ ತಲೆ ಬಾಗಿಸುತ್ತೇನೆ ವಿನಃ ಬೇರೆ ಯಾರಾದ್ರೂ ಹೇಳಿದ್ರೆ ಕೇಳುವ ಪ್ರಶ್ನೆ ಇಲ್ಲ. ಹಾಲಪ್ಪ ಆಪಾದನೆ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು ಅಂತ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ

ಈ ಹಿಂದೆ ಸಾಗರ ಕ್ಷೇತ್ರದಿಂದ ಟಿಕೆಟ್ ಸಿಗದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವ್ರಿಗೆ ಬೈದವರಿಗೆ ಟಿಕೆಟ್ ನೀಡಲಾಗುತ್ತಿದೆ ಅಂತ ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು.

https://youtu.be/Hs0JxZBSuK8

Haratalu Halappa

Share This Article
Leave a Comment

Leave a Reply

Your email address will not be published. Required fields are marked *