ಬೆಂಗಳೂರು: ನಾಯಕ ಸುನೀಲ್ ಚೆಟ್ರಿ ಅವರ ಆರಂಭಿಕ ಗೋಲಿನ ಬಲದಿಂದ ಶನಿವಾರ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಫುಟ್ಬಾಲ್ ತಂಡ (Indian Football Team) ಗೆದ್ದು, ಸ್ಯಾಫ್ ಫುಟ್ಬಾಲ್ ಚಾಂಪಿಯನ್‌ಶಿಪ್ (SAFF Championship 2023) ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
2️⃣ goals in quick succession ???? India are through to the #SAFFChampionship2023 Semifinal ????????????#NEPIND ⚔️ #IndianFootball ⚽️ #BlueTigers ???? pic.twitter.com/ByzfjsKSZY
— Indian Football Team (@IndianFootball) June 24, 2023
Advertisement
ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಚೆಟ್ರಿ ಬಳಗ ರಸದೌತಣ ನೀಡುವ ಜೊತೆಗೆ ಎದುರಾಳಿ ನೇಪಾಳ ತಂಡವನ್ನ 2-0 ಅಂತರದಲ್ಲಿ ಮಣಿಸಿತು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್ ತಂಡ
Advertisement
ಭಾರತ ಮತ್ತು ನೇಪಾಳ (Nepal Football Team) ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಫಸ್ಟ್ ಹಾಫ್‌ನಲ್ಲಿ ಇತ್ತಂಡಗಳ ಸಮಬಲ ಪೈಪೋಟಿಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಸೆಕೆಂಡ್ ಹಾಫ್‌ನಲ್ಲಿ ನಾಯಕ ಸುನೀಲ್ ಚೆಟ್ರಿ (Sunil Chhetri) ಮ್ಯಾಜಿಕ್‌ನಿಂದ ಮೊದಲ ಗೋಲು ದಾಖಲಾಯಿತು. ಈ ಮೂಲಕ ಚೆಟ್ರಿ 91ನೇ ಅಂತಾರಾಷ್ಟ್ರೀಯ ಗೋಲನ್ನು ದಾಖಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸಹ ಆಟಗಾರ ಮಹೇಶ್ ಸಿಂಗ್ ಮತ್ತೊಂದು ಗೋಲು ದಾಖಲಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
Advertisement
Advertisement
ಆರಂಭಿಕ ಪಂದ್ಯದಲ್ಲೇ 4-0 ಗೋಲುಗಳ ಅಂತರದಲ್ಲಿ ಪಾಕಿಸ್ತಾನ (Pakistan Football Team) ತಂಡವನ್ನು ಮಣಿಸಿದ್ದ ಭಾರತ ತಂಡ ಸತತ 2ನೇ ಗೆಲುವು ದಾಖಲಿಸುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಗ್ರೂಪ್ ಹಂತದ ಅಂತಿಮ ಪಂದ್ಯ ಜೂನ್ 27ರಂದು ಕುವೈತ್ ವಿರುದ್ಧ ನಡೆಯಲಿದೆ. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಯಕ ಸುನೀಲ್ ಚೆಟ್ರಿ ಹ್ಯಾಟ್ರಿಕ್ ಗೋಲುಗಳನ್ನು ಗಳಿಸುವ ಮೂಲಕ ಮಿಂಚಿದ್ದರು. ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಟದಲ್ಲಿ ಅತಿಥೇಯ ತಂಡ ಉತ್ತಮ ಪ್ರದರ್ಶನ ನೀಡಿತ್ತು.