ಬೆಂಗಳೂರು: ಕರ್ನಾಟಕದಲ್ಲಿರುವ ಎಲ್ಲಾ ಸಿಎನ್‌ಜಿ (CNG) ವಾಹನ ಮಾಲೀಕರು ತಮ್ಮ ವಾಹನಗಳ ಸಿಲಿಂಡರ್‌ಗಳಿಗೆ (Cylinder) ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಜನವರಿ 9 ರಂದು ಹೊರಡಿಸಲಾದ ಈ ಸುತ್ತೋಲೆಯು ಸಿಎನ್‌ಜಿ ವಾಹನಗಳಿಗೆ ರಾಷ್ಟ್ರೀಯ ಮಾರ್ಗಸೂಚಿಗಳ ಅನುಗುಣವಾಗಿದೆ. ವಾಹನ ಮಾಲೀಕರು ಮೂರು ವರ್ಷಗಳಿಗೊಮ್ಮೆ ಪ್ರತಿಯೊಂದು ಸಿಲಿಂಡರ್ ಅನ್ನು ʼಹೈಡ್ರೋಸ್ಟಾಟಿಕ್ ಸ್ಟ್ರೆಚ್ʼ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯ ಎಂದು ತಿಳಿಸಿದೆ.
Advertisement
ಗ್ಯಾಸ್ ಆಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL), ರಾಜ್ಯದ ಅತಿದೊಡ್ಡ ಸಿಎನ್‌ಜಿ ಪೂರೈಕೆದಾರರಾಗಿದ್ದು ಇದು ಕರ್ನಾಟಕದಲ್ಲಿ 52,000 ಸಿಎನ್‌ಜಿ ವಾಹನಗಳಿವೆ ಎಂದು ಅಂದಾಜಿಸಿದೆ. ಅದರಲ್ಲಿ 48% ಅಥವಾ ಸುಮಾರು 25,000 ಬೆಂಗಳೂರಿನಲ್ಲಿವೆ. ಈ ಮಾಹಿತಿಯಲ್ಲಿ ಆಫ್ಟರ್ ಮಾರ್ಕೆಟ್ ನಲ್ಲಿ ಸಿಎನ್‌ಜಿ ಸಿಲಿಂಡರ್ ಗಳನ್ನು ಆಳವಡಿಸಿದ ವಾಹನಗಳು ಮತ್ತು GAIL ನಿಂದ ಸರಬರಾಜು ಮಾಡಲಾದ ವಾಹನಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ
Advertisement
Advertisement
ಈ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ಬೆಂಗಳೂರು ಮೂಲದ ಸಂಸ್ಥೆ-ಎಂಜಿ ಆರ್ ಹೈಡ್ರೋಟೆಸ್ಟ್ ಇಂಕ್ ಅನ್ನು ಅಧಿಕೃತವಾಗಿ ನೇಮಿಸಿದೆ. ಅದೇ ರೀತಿ ಶೀಘ್ರದಲ್ಲೇ ಇನ್ನೆರೆಡು ಕಂಪನಿಗಳು ಈ ಪರೀಕ್ಷೆಗಳನ್ನು ನಡೆಸಲು ಅಧಿಕಾರವನ್ನು ಪಡೆಯಲಿದ್ದಾರೆ. ಎಂಜಿಆರ್ ಹೈಡ್ರೊಟೆಸ್ಟ್ PESO (ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ)ಯಿಂದ ಸಂಭಂಧಿತ ಪ್ರಮಾಣಿಕರಣಗಳನ್ನು ಹೊಂದಿದೆ.
Advertisement
ಈ ಕುರಿತು ಮಾತನಾಡಿದ ಎಂಜಿಆರ್ ಹೈಡ್ರೊಟೆಸ್ಟ್ ವ್ಯವಸ್ಥಾಪಕ ಪಾಲುದಾರ ಜ್ಞಾನಚಂದ್ ಬಾಂಟಿಯಾ “ಕೇಂದ್ರದ ಗ್ಯಾಸ್ ಸಿಲಿಂಡರ್ ನಿಯಮಗಳು 2016ರ ಪ್ರಕಾರ, ಬಿಐಎಸ್ ಮಾನದಂಡಗಳು 154975 ಮತ್ತು ಬಿಐಎಸ್ 8481 ಮಾನದಂಡಗಳ ಪ್ರಕಾರ ಸಿಲಿಂಡರ್ ನ ಜೀವಿತಾವಧಿ 20 ವರ್ಷಗಳಾಗಿದ್ದು ಪ್ರತಿ ಮೂರು ವರ್ಷಗಳಿಗೊಮ್ಮೆ ಸಿಲಿಂಡರ್ ಗಳ ಹೈಡ್ರೋಸ್ಟಾಟಿಕ್ ಸ್ಟ್ರೆಚ್ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ಈ ಕುರಿತು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ” ಎಂದರು.
ಸಿಎನ್‌ಜಿ ವಾಹನಗಳ ಕನ್ವರ್ಷನ್ ಹಾಗೂ ಹೊಸ ನೋಂದಣಿ ಹೆಚ್ಚಾದಂತೆ, ಸುರಕ್ಷತೆಯ ಕಾಳಜಿಯನ್ನು ತಿಳಿಸುವ ಅಗತ್ಯವಿದೆ ಎಂದು ಬಾಂಡಿಯಾ ಹೇಳಿದರು. “ಸಿಎನ್‌ಜಿ 200 ಬಾರ್ ಗಳು ಹೆಚ್ಚಿನ ಒತ್ತಡವನ್ನು ಹೊಂದಿದ್ದು, ಇದು ಎಲ್‌ಪಿಜಿ ಗಿಂತ 10 ಪಟ್ಟು ಹೆಚ್ಚು ಒತ್ತಡವು ಹೆಚ್ಚಿರುವುದರಿಂದ, ಸಿಎನ್‌ಜಿ ಸಿಲಿಂಡರ್ ಅನ್ನು ದಪ್ಪದ ಗೇಜ್ ನಿಂದ (8ಎಂಎಂ ನಿಂದ 10 ಎಂಎಂ) ತಯಾರಿಸಲಾಗುತ್ತದೆ ಹಾಗೂ ಇದು ತಡೆರಹಿತವಾಗಿರುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದ ಎಲ್ಲಾ ಆರ್‌ಟಿಒ ಕಚೇರಿಗಳು ಮತ್ತು ಸಾರಿಗೆ ಜಂಟಿ ಆಯುಕ್ತರಿಗೆ ಸುತ್ತೋಲೆ ಕಳುಹಿಸಿದೆ. ಮೂರು ವರ್ಷಗಳನ್ನು ಪೂರೈಸಿದ ಎಲ್ಲಾ ಸಿಎನ್‌ಜಿ ವಾಹನಗಳು ಫಿಟ್ ನೆಸ್ ಪರೀಕ್ಷೆಯ ಸಮಯದಲ್ಲಿ ಈ ಸುರಕ್ಷತಾ ಪ್ರಮಾಣಪತ್ರವನ್ನು ಇತರ ದಾಖಲೆಗಳೊಂದಿಗೆ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಹೇಳುತ್ತದೆ.
ಒಮ್ಮೆ ಪರೀಕ್ಷೆಗಳು ಮುಗಿದ ನಂತರ, ಈ ಪ್ರಮಾಣಪತ್ರವನ್ನು PESO ಅನುಮೋದಿಸಿದೆ ಮತ್ತು ಆನ್ ಲೈನ್‌ನಲ್ಲಿ ನೀಡಲಾಗುತ್ತದೆ. PESO ವೆಬ್ ಸೈಟ್ ಸಾರಿಗೆ ಇಲಾಖೆಯ ವಾಹನದ ವೆಬ್ ಸೈಟ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಈ ಪ್ರಮಾಣಪತ್ರಗಳು ಅಲ್ಲಿಯೂ ಲಭ್ಯವಾಗುತ್ತವೆ” ಎಂದು ಬಾಂಟಿಯಾ ತಿಳಿಸಿದರು. ಪ್ರಸ್ತುತ ಕರ್ನಾಟಕವು 100ಕ್ಕೂ ಹೆಚ್ಚು ಸಿಎನ್‌ಜಿ ಕೇಂದ್ರಗಳನ್ನು ಹೊಂದಿದೆ. ಅದರಲ್ಲಿ ಸುಮಾರು 55% ರಷ್ಟು ಬೆಂಗಳೂರಿನಲ್ಲಿವೆ ಎಂದು ಅವರು ಹೇಳಿದರು.
ನಾವು ಈಗ ಆರ್‌ಟಿಒಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಮತ್ತು ನಿಲ್ದಾಣಗಳಲ್ಲಿ ಈ ಕುರಿತಾದ ಫಲಕಗಳನ್ನು ಹಾಕಲು GAILನೊಂದಿಗೆ ಸಂಪರ್ಕ ಹೊಂದಿದ್ದೇವೆ. ಆದ್ದರಿಂದ ವಾಹನ ಮಾಲೀಕರಿಗೆ ಪರೀಕ್ಷೆಗಳ ಬಗ್ಗೆ ತಿಳಿಸಬಹುದು ಹಾಗೂ ಭವಿಷ್ಯದಲ್ಲಿ ಅವುಗಳನ್ನು ಯೋಜಿಸಬಹುದು. ಅಪಘಾತಗಳ ಸಂದರ್ಭದಲ್ಲಿ ವಿಮೆಯನ್ನು ಪಡೆಯಲು ಕೂಡ ಈ ಪರೀಕ್ಷೆಗಳು ಬೇಕಾಗುತ್ತವೆ ಎಂದು ಅವರು ಹೇಳಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k