ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ ಮೂವರು ಪೈಲೆಟ್‍ಗಳನ್ನು ಅಮಾನತುಗೊಳಿಸಿದೆ.
ಒಬ್ಬರು ಏರ್ ಇಂಡಿಯಾ ಹಾಗೂ ಇನ್ನಿಬ್ಬರು ಸ್ಪೈಸ್ ಜೆಟ್ ವಿಮಾನದ ಪೈಲೆಟ್‍ಗಳನ್ನು ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಮೂವರು ಪೈಲೆಟ್‍ಗಳ ಜೊತೆಗೆ ಓರ್ವ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯೂ ಅಮಾನತುಗೊಂಡಿದ್ದಾರೆ.
ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವಾಗ ರನ್ ವೇ ಅಂಚಿನಲ್ಲಿರುವ ದೀಪಗಳಿಗೆ ಹಾನಿಯಾಗಿತ್ತು. ಹೀಗಾಗಿ ಸ್ಪೈಸ್ ಜೆಟ್ ವಿಮಾನದ ಇಬ್ಬರು ಪೈಲೆಟ್‍ಗಳ ಫ್ಲೈಯಿಂಗ್ ಪರವಾನಗಿ(ಲೈಸೆನ್ಸ್)ಗಳನ್ನು ಆರು ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 2ರಂದು ಪುಣೆ-ಕೊಲ್ಕತ್ತಾ ಮಧ್ಯೆ ಆರತಿ ಗುಣಶೇಖರನ್ ಹಾಗೂ ಸೌರಭ್ ಗುಲಿಯಾ ವಿಮಾನ ಹಾರಿಸುತ್ತಿದ್ದರು. ಈ ವೇಳೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಘಟನೆ ಕುರಿತು ತನಿಖೆ ನಡೆಸಲಾಗಿದ್ದು, ಸ್ಪೈಸ್ ಜೆಟ್ ವಿಮಾನ ರನ್ ವೇ hಡಿeshoಟಜ ಠಿoiಟಿಣ ನಿಂದ 1300 ಅಡಿಗಳಷ್ಟು ದೂರ ಚಲಿಸಿ ಬಲಗಡೆ ಅಂಚಿನಲ್ಲಿರುವ ದೀಪಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.