ಬೆಂಗಳೂರು: ದೀಪಾವಳಿ ಅಂದರೆ ಬೆಳಕಿನ ಹಬ್ಬ, ಸಂಭ್ರಮದ ಹಬ್ಬ. ಆದರೆ ಈ ಬೆಳಕಿನ ಹಬ್ಬ ಅದೆಷ್ಟು ಜನರ ಬದುಕಲ್ಲಿ ಕತ್ತಲೆ ತಂದಿದೆ. ಪ್ರತಿ ವರ್ಷ ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಳ್ಳುವ ದುರಂತಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಯಾರೋ ಹಚ್ಚಿದ ಪಟಾಕಿಯ ಕಿಡಿಗೆ ಇನ್ಯಾರೋ ಕಣ್ಣು ಕಳೆದುಕೊಳ್ಳುವ ದುರಂತ ನಡೆಯುತ್ತಿದೆ. ಅಷ್ಟೆ ಅಲ್ಲದೇ ಶ್ರವಣ ದೋಷ, ಮಾಲಿನ್ಯದ ಪ್ರಮಾಣ ಹೆಚ್ಚಾಗುವುದರ ಜೊತೆಗೆ ಅಸ್ತಮಾ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ.
ದೀಪಾವಳಿ ಪಟಾಕಿ ಸಿಡಿತದಿಂದ ಗಾಯಗೊಂಡವರಿಗಾಗಿ ನಗರದ ಮಿಂಟೋ ಆಸ್ಪತ್ರೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಿದೆ. ಅಲ್ಲದೇ ಇಪ್ಪತ್ತಾನಾಲ್ಕು ಗಂಟೆ ವೈದ್ಯರು ಹಾಗೂ ನರ್ಸ್ ಗಳ ಸೇವೆ ಲಭ್ಯವಿರುವಂತೆ ಸೂಚಿಸಿದೆ. 080-26707176 ಸಹಾಯವಾಣಿಯನ್ನು ಕೂಡ ತೆರೆದಿದೆ. ನಗರದ ನಾರಾಯಣ ನೇತ್ರಾಲಯದಲ್ಲಿ ಡಾ ಭುಜಂಗ ಶೆಟ್ಟಿ ದೀಪಾವಳಿ ಸಿಡಿತದಿಂದ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡೋದಾಗಿ ಹೇಳಿದ್ದಾರೆ.
Advertisement
Advertisement
ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದರೆ ತಕ್ಷಣಕ್ಕೆ ಯಾವ ಏನು ಮಾಡಬೇಕು, ಯಾವ ರೀತಿ ಮುನ್ನೇಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಅನ್ನುವ ಮಾಹಿತಿ ಇಲ್ಲಿದೆ.
1. ಸ್ಫೋಟಕ ಪಟಾಕಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ, ಮಕ್ಕಳಿಗೆ ಪಟಾಕಿ ಅದರಲ್ಲೂ ರಾಕೆಟ್‍ನಂತಹ ಡೇಂಜರಸ್ ಪಟಾಕಿ ನೀಡಬೇಡಿ. ಮಕ್ಕಳನ್ನು ಒಂಟಿಯಾಗಿ ಪಟಾಕಿ ಹೊಡೆಯಲು ಬಿಡಬೇಡಿ.
2. ಪಟಾಕಿ ಸುಡೋದಕ್ಕೆ ಗಾಜಿನ ಬಾಟಲಿ, ಗಾಜಿನ ಕಂಟೇನರ್ ಬಳಸಬೇಡಿ. ಇದರಿಂದ ಅದರ ಚೂರು ಕಣ್ಣಿಗೆ ಹಾನಿ ಮಾಡಬಹುದು.
3. ಪಟಾಕಿ ಸಿಡಿಸುವಾಗ ರೇಷ್ಮೆ, ಸಿಂಥೆಟಿಕ್ ಹಾಗೂ ಸಡಿಲವಾದ ಬಟ್ಟೆ ಧರಿಸಬೇಡಿ
4. ಪಟಾಕಿ ಕಿಡಿ ಕಣ್ಣಿಗೆ ಬಿದ್ದಾಗ ಕಣ್ಣು ಉಜ್ಜಿಕೊಳ್ಳಬೇಡಿ.
6. ಕೈಯಲ್ಲಿ ಪಟಾಕಿ ಸುಡುವ ಸಾಹಸ ಮಾಡಬೇಡಿ.
Advertisement
Advertisement
ಹೀಗೆ ಮಾಡಿ:
1. ಪಟಾಕಿ ಸಿಡಿಸುವಾಗ ಕಾಟನ್ ಬಟ್ಟೆ ಧರಿಸಿ
2. ತೆರೆದ ಪ್ರದೇಶದಲ್ಲಿ ಪಟಾಕಿ ಸಿಡಿಸಿ
3. ಕಣ್ಣಿಗೆ ಕಿಡಿ ತಾಕಿದಾಗ ಸ್ವಚ್ಛ ನೀರಿನಿಂದ ಕಣ್ಣನ್ನು ತೊಳೆಯಿರಿ, ಕೂಡಲೇ ಕಣ್ಣಿನ ಆಸ್ಪತ್ರೆಗೆ ಹೋಗಿ
4. ಪಟಾಕಿ ಶಬ್ಧ ಕಿವಿಗೆ ಆಗುವ ಘಾಸಿ ತಡೆಯಲು ಹತ್ತಿಯನ್ನು ಕಿವಿಯಲ್ಲಿ ಇಟ್ಟುಕೊಳ್ಳಿ.
5. ಪಟಾಕಿ ಮುಟ್ಟಿದ ಮೇಲೆ ಕೈಯನ್ನು ಸ್ವಚ್ಛವಾಗಿ ತೊಳೆಯಿರಿ
6. ಆಸ್ತಮಾ ಸಮಸ್ಯೆ ಇರುವವರು ಸಿಟಿಯಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv