ಮೈಸೂರು/ಚಾಮರಾಜನಗರ: ಮೈಸೂರು, ಚಾಮರಾಜನಗರ (Chamarajanagara) ಭಾಗದಲ್ಲಿ ಹುಲಿ ದಾಳಿ ಹೆಚ್ಚಳ ಹಿನ್ನೆಲೆ ಸಫಾರಿ ಬ್ಯಾನ್ ಮಾಡಿ ಬರೋಬ್ಬರಿ ಒಂದು ತಿಂಗಳು ಕಳೆದಿದೆ.
ಒಂದು ತಿಂಗಳಿಂದ ಸಫಾರಿ (Safari) ವಾಹನಗಳು ನಿಂತಲ್ಲೇ ನಿಂತಿವೆ. ಇದರಿಂದ ಆದಾಯಕ್ಕೂ ತೀವ್ರ ಪೆಟ್ಟು ಬಿದ್ದಿದ್ದು, ಗುತ್ತಿಗೆ ನೌಕರರು ಸಂಬಳ ಕಡಿತ ಜೊತೆಗೆ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಾಗೇ ಸಫಾರಿ ಗೈಡ್ ಹಾಗೂ ಜೀಪ್ ಚಾಲಕರಿಗೆ ಆತಂಕ ಎದುರಾಗಿದೆ. ಇದನ್ನೂ ಓದಿ: ಬೆಂಗಳೂರು ಉಪವಿಭಾಗಾಧಿಕಾರಿಗೆ 25,000, ತಹಶೀಲ್ದಾರ್‌ಗೆ 50 ಸಾವಿರ ದಂಡ ವಿಧಿಸಿದ ಮಾಹಿತಿ ಆಯೋಗ

ಜೊತೆಗೆ ಸಫಾರಿ ಸ್ಥಳದಲ್ಲಿ ಶಾಪ್‌ಗಳು ಕೂಡ ಮುಚ್ಚಿದ್ದು ಜರ್ಕೀನ್ ಹಾಗೂ ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಮಾರಾಟ ಮಳಿಗೆ ಕೂಡ ಕ್ಲೋಸ್ ಆಗಿದೆ. ವೈಜ್ಞಾನಿಕ ಕಾರಣ ಇಟ್ಟುಕೊಂಡು ಸಫಾರಿ ಬ್ಯಾನ್ ಮಾಡಿ, ಅದನ್ನು ಬಿಟ್ಟು ಏಕಾಏಕಿ ಬ್ಯಾನ್‌ನಿಂದ ನಮ್ಮ ಬದುಕು ತೀರ ದುಸ್ತರವಾಗಿದೆ. ಇದನ್ನೂ ಓದಿ: Uttara Kannada | ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ – 50 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿ
ಹೀಗಾಗಿ ಸರ್ಕಾರ ಸಫಾರಿಯನ್ನು ಪುನಾರಂಭಿಸುವಂತೆ ರೆಸಾರ್ಟ್, ಹೋಂ ಸ್ಟೇ ಹಾಗೂ ಹೊಟೇಲ್ ಮಾಲೀಕರು ಸೇರಿದಂತೆ ಸ್ಥಳೀಯ ವ್ಯಾಪಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಮುರಿಯಿತು – ಮೌನ ಮುರಿದು ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ

