ಹರಿದ್ವಾರದಿಂದ ಮುಸ್ಲಿಂರನ್ನು ಬಹಿಷ್ಕರಿಸಿ: ಸಾಧ್ವಿ ಪ್ರಾಚಿ

Public TV
1 Min Read
sadvi Prachi

ಲಕ್ನೋ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹರಿದ್ವಾರದಲ್ಲಿರುವ ಮುಸ್ಲಿಂರನ್ನು ಬಹಿಷ್ಕರಿಸಿ ಎಂದು ಸಾಧ್ವಿ ಪ್ರಾಚಿ ಹೇಳಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಕೈರನಾ ಶಾಸಕ ನಾಹಿದ್ ಹಸನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾಧ್ವಿ ಪ್ರಾಚಿ, ಶಾಸಕರು ಮುಸ್ಲಿಂರಿಗೆ ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸದಂತೆ ಹೇಳುತ್ತಾರೆ. ನಾನು ಹರಿದ್ವಾರದ ಎಲ್ಲ ಹಿಂದೂಗಳಲ್ಲಿ ಮುಸ್ಲಿಂರು ತಯಾರಿಸುವ ಕಾಂವಡಾ(ಪೂಜಾ ಸಾಮಾಗ್ರಿ) ಖರೀದಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದಾರೆ.

sadhvi prachi

ಹರಿದ್ವಾರದಲ್ಲಿರುವ ಶೇ.99ರಷ್ಟು ಮುಸ್ಲಿಂರು ಹಿಂದೂಗಳ ಪೂಜೆಗೆ ಬೇಕಾಗುವ ಕಾಂವಡಾ ತಯಾರಿಸುತ್ತಾರೆ. ಮುಸ್ಲಿಂರನ್ನು ಹರಿದ್ವಾರದ ಕಳುಹಿಸಲು ಅವರು ತಯಾರಿಸುವ ವಸ್ತುಗಳನ್ನು ಖರೀದಿಸಬೇಡಿ. ಹರಿದ್ವಾರದಲ್ಲಿರುವ ಹಿಂದೂಗಳಿಗೂ ದಿನಗೂಲಿ ಸಿಗಬೇಕೆಂದ್ರೆ ಮುಸ್ಲಿಂರನ್ನು ಬಹಿಷ್ಕರಿಸಿ ಎಂದು ಒತ್ತಾಯಿಸಿದ್ದಾರೆ.

ಎಲ್ಲಿ ಮುಸ್ಲಿಂರ ಸಂಖ್ಯೆ ಹೆಚ್ಚಾಗಿರುತ್ತೋ ಅಲ್ಲಿ ವಿವಾದ ಹುಟ್ಟಿಕೊಳ್ಳುತ್ತದೆ. ಈ ಮೊದಲು ಕೈರನಾದಿಂದ ಹಿಂದೂಗಳ ಮನೆಯನ್ನು ಖಾಲಿ ಮಾಡಿಸಲಾಯ್ತು. ಇದೀಗ ಹಿಂದೂಗಳ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬಾರದು ಶಾಸಕ ಹಸನ್ ಹೇಳುತ್ತಾರೆ. ನೀವು ಮುಸ್ಲಿಂರು ತಯಾರಿಸುವ ಕಾಂವಡಾ ಖರೀದಿಸಬೇಡಿ. ನಾವುಗಳು ಹಿಂದೂ, ಹಿಂದೂಸ್ಥಾನ್ ನಮ್ಮದು. ಮಾನವೀಯತೆ ದೃಷ್ಟಿಯಿಂದ ಭಾರತದಲ್ಲಿ ಮುಸ್ಲಿಂರು ವಾಸಿಸುತ್ತಿದ್ದಾರೆ. ಇಲ್ಲಿ ಕಳ್ಳತನ, ಸುಲಿಗೆ ಮಾಡಿದ್ರೆ ಸುಮ್ಮನೆ ಕುಳಿತುಕೊಳ್ಳಲು ನಾವು ಮಹಾತ್ಮ ಗಾಂಧೀಜಿ ಅಲ್ಲ. ಮುಸ್ಲಿಂರೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೈ ಶ್ರೀರಾಮ ಹೇಳದಿದ್ದರೆ ಚೆನ್ನಾಗಿರಲ್ಲ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Nahid Hasan

ಶಾಸಕ ನಾಹಿದ್ ಹಸನ್ ಹೇಳಿದ್ದೇನು?
ಕೈರನಾ ಮತ್ತು ಸುತ್ತಮುತ್ತಲಿನ ಗ್ರಾಮದ ನೀವು ಇಲ್ಲಿಯ ಬಿಜೆಪಿ ಬೆಂಬಲಿತರ ಅಂಗಡಿಯಲ್ಲಿ ಯಾವ ವಸ್ತುವನ್ನು ಖರೀದಿಸಬೇಡಿ ಎಂದು ನಾಹಿದ್ ಹಸನ್ ವಿವಾವಾದತ್ಮಕ ಹೇಳಿಕೆ ನೀಡಿದ್ದರು. ಹತ್ತು ಅಥವಾ ಒಂದು ತಿಂಗಳು ಕಷ್ಟವಾದರೂ ಪರವಾಗಿಲ್ಲ ಪಾಣಿಪತ್ ಗೆ ತೆರಳಿ ವಸ್ತುಗಳನ್ನು ಖರೀದಿಸಿ. ಮುಂದಿನ ಒಳ್ಳೆಯ ದಿನಕ್ಕಾಗಿ ಸ್ವಲ್ಪ ಕಷ್ಟ ಅನುಭವಿಸಬೇಕಿದೆ ಎಂದು ಶಾಸಕ ಹಸನ್ ತಮ್ಮ ಕ್ಷೇತ್ರದ ಮುಸ್ಲಿಂ ಜನತೆಯಲ್ಲಿ ಕೈ ಮುಗಿದು ನಿಮ್ಮಲ್ಲಿ ಮನವಿ ಮಾಡಿಕೊಂಡಿದ್ದರು.

Share This Article