ಉಡುಪಿ: ದೇಶದಲ್ಲಿ ಗೋವು ಕಳ್ಳರ ಹಾವಳಿ ವಿಪರೀತವಾಗಿದೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡುವ ಪರಿಸ್ಥಿತಿ ಇದೆ. ಪ್ರತಿ ಮನೆಯಲ್ಲಿ ತಲ್ವಾರ್ ಗಳನ್ನು ಖರೀದಿಸಿ ಗೋವು ರಕ್ಷಣೆಗೈಯಿರಿ ಎಂದು ಸಾಧ್ವಿ ಸರಸ್ವತಿ ಕರೆ ನೀಡಿದ್ದಾರೆ.
Advertisement
ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿಂದೂ ಸಂಗಮ ಕಾರ್ಯಕ್ರಮ ಭಾನುವಾರ ಸಂಜೆ ನಡೆದಿದೆ. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
Advertisement
Advertisement
ಸಾಧ್ವಿ ಸರಸ್ವತಿ ದಿಕ್ಸೂಚಿ ಭಾಷಣಕಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗೋಭಕ್ಷಕರು ಹಾವಳಿ ಹೆಚ್ಚಾಗಿದೆ. ಮನೆಗೆ, ಕೊಟ್ಟಿಗೆಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ. ಗೋವು ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ತಲ್ವಾರ್ ಗಳನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್
Advertisement
ಮೊಬೈಲ್ ಕಂಪ್ಯೂಟರ್ ಗೆ 50 ಸಾವಿರ ಒಂದು ಲಕ್ಷ ರೂಪಾಯಿ ಕೊಟ್ಟು ಖರೀದಿಸುವ ನಿಮಗೆ ಒಂದು ಸಾವಿರ ರೂಪಾಯಿ ಕೊಟ್ಟು ತಲ್ವಾರ್ ಖರೀದಿಸಲು ಕಷ್ಟವಲ್ಲ. ತಲ್ವಾರ್ ಖರೀದಿ ಮಾಡಿರಿ, ಗೋವಿನ ರಕ್ಷಣೆ ಮಾಡಿ ಎಂದು ಕರೆ ನೀಡಿದರು. ಕಲ್ಲಿಗೆ ಕಲ್ಲೇ ಉತ್ತರ, ಬಾಣಕ್ಕೆ ಬಾಣವೇ ಉತ್ತರ. ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಳ್ಳಲು ಕಾಲ ಇದಲ್ಲ ಎಂದರು. ನಾನು ಕೂಡ ಗೋವುಗಳು ಇರುವ ಮನೆಯಿಂದ ಬಂದವಳು. ಗೋವಿನ ಪಾಲನೆ-ಪೋಷಣೆ ಎಷ್ಟು ಕಷ್ಟ ಎಂದು ಗೊತ್ತಿದೆ ಎಂದರು. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್