ಬೆಂಗಳೂರು: ಹುತೇಕ ಜನಪ್ರಿಯ ನಟರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೋಸ ನಡೆಯುತ್ತಿದ್ದು, ಈ ಹಿಂದೆ ರಚಿತಾ ರಾಮ್ ಅವರು ಟ್ವಿಟ್ಟರ್ ನಲ್ಲಿ ಹೆಸರಿನಲ್ಲಿ ಮೋಸ ಮಾಡಲಾಗಿತ್ತು. ಇದೀಗ ಸ್ಯಾಂಡಲ್‍ವುಡ್ ಕಾಮಿಡಿ ಕಿಂಗ್ ಸಾಧುಕೋಕಿಲಾ ಅವರಿಗೂ ಇದೇ ಪರಿಸ್ಥಿತಿ ಎದುರಾಗಿದ್ದು, ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೋಸ ಮಾಡಲಾಗುತ್ತಿದೆ.
ಹೌದು ಈ ಹಿಂದೆ ರಚಿತಾ ರಾಮ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದ ರೀತಿಯಲ್ಲೇ ಸಾಧುಕೋಕಿಲಾ ಅವರ ಖಾತೆಯನ್ನೂ ತೆರೆಯಲಾಗಿದ್ದು, ಈ ಮೂಲಕ ಅವರ ಅಭಿಮಾನಿಗಳಿಗೆ ಮೋಸ ಮಾಡಲಾಗುತ್ತಿದೆ. ಸಾಧುಕೋಕಿಲಾ ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ನೋಡಿದ ಅಭಿಮಾನಿಗಳು, ಅವರೊಂದಿಗೆ ಸಂಪರ್ಕದಲ್ಲಿರಬಹುದು ಎಂದು ಸಂತಸಪಟ್ಟಿದ್ದರು. ಆದರೆ ಇದರ ಅಸಲಿಯತ್ತೇ ಬೇರೆಯಾಗಿದ್ದು, ಯಾರೋ ಕಿಡಿಗೇಡಿಗಳು ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ.
Advertisement
Friends just Spoke to Sadhu Sir..he clearly told me that he is not on any social media..hence this is a fake account.. @chitraloka @cineloka @PopcornKannada @Manu7454 @NamCinema @namtalkies pic.twitter.com/TLBwLBv93N
— Raghuram (@raghuram9777) March 21, 2020
Advertisement
ಪ್ರಾರಂಭದಲ್ಲಿ ಸಾಧುಕೋಕಿಲಾ ಅವರ ಖಾತೆಯೇ ಎಂದು ಹೆಚ್ಚು ಅಭಿಮಾನಿಗಳು ಇದನ್ನು ಫಾಲೋ ಮಾಡಿದ್ದರು. ಆದರೆ ನಂತರ ಸಾಧು ಟ್ವಿಟ್ಟರ್‍ಗೆ ಎಂಟ್ರಿ ಕೊಟ್ಟಿಲ್ಲ, ಇದು ನಕಲಿ ಖಾತೆ ಎಂಬುದು ತಿಳಿದಿದ್ದು, ಈ ಕುರಿತು ನಟ ರಘುರಾಮ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಅಲ್ಲದೆ ಸಾಧುಕೋಕಿಲಾ ಅವರು ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ. ಇವೆಲ್ಲ ನಕಲಿ ಖಾತೆ ಎಂದು ಗೊತ್ತಾಗಿದೆ.
Advertisement
ಈ ಕುರಿತು ರಘುರಾಮ್ ಅವರು ಸ್ಪಷ್ಟಪಡಿಸಿದ್ದು, ಗೆಳೆಯರೇ ಈಗಷ್ಟೇ ನಾನು ಸಾಧುಕೋಕಿಲಾ ಅವರೊಂದಿಗೆ ಮಾತನಾಡಿದೆ. ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ನಕಲಿ ಖಾತೆ ಎಂದು ಸಾಧುಕೋಕಿಲಾ ಹೆಸರಿನ ನಕಲಿ ಖಾತೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement
ಇದು ನಕಲಿ ಖಾತೆ ಎಂಬುದು ತಿಳಿಯುತ್ತಿದ್ದಂತೆ ಸಾಧು ಕೋಕಿಲಾ ಹೆಸರಿನ ಖಾತೆಯನ್ನು ಡಿಲೀಟ್ ಮಾಡಲಾಗಿದ್ದು, ಇದು ಕಿಡಿಗೇಡಿಗಳ ಕೆಲಸ ಎಂಬುದು ಗೊತ್ತಾಗಿದೆ. ಈ ಕುರಿತು ನಟ ರಘುರಾಮ್ ಅವರು ಅಭಿಮಾನಿಗಳಿಗೆ ವಿಷಯ ತಿಳಿಸುವ ಮೂಲಕ ಮೋಸ ಹೋಗುವುದನ್ನು ತಪ್ಪಿಸಿದ್ದಾರೆ. ಅಲ್ಲದೆ ಸಾಧುಕೋಕಿಲಾ ಅವರು ಯಾವುದೇ ಟ್ವಿಟ್ಟರ್ ಖಾತೆಯಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.