ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದರೆ ಧೈರ್ಯ ಬರುತ್ತೆ ಎಂದು ಕನ್ನಡ ಚಲನಚಿತ್ರರಂಗದ ಹಾಸ್ಯ ನಟ ಸಾಧುಕೋಕಿಲ ಹೇಳಿದರು.
Advertisement
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ನಾನಂತೂ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಚಿತ್ರರಂಗದ ಕಲಾವಿದರೆಲ್ಲರೂ ಬರುತ್ತಾರೆ ಅಂತಾ ನನಗೆ ಮಾಹಿತಿ ಇದೆ. ಶಿವಣ್ಣನವರು ಬರುತ್ತಿದ್ದಾರೆ ಅಂತಾ ಹೇಳುತ್ತಿದ್ದಾರೆ. ಅವರು ಬಂದರೆ ಒಳ್ಳೆಯದು, ಇವಾಗ ಶಿವಣ್ಣ ಅವರಷ್ಟೇ ಅಲ್ಲ. ಈ ಹಿಂದೆ ಅಣ್ಣಾವ್ರು ಇದ್ದಾಗ ಕಲಾವಿದರೆಲ್ಲರೂ ಅವರೊಟ್ಟಿಗೆ ಹೋಗುತ್ತಿದ್ದೆವು. ಇಂತಹ ಹೋರಾಟಗಳಲ್ಲಿ ಅವರೂ ಸಹ ಪಾಲ್ಗೊಳ್ಳುತ್ತಿದ್ದರು. ಕಾವೇರಿ ನೀರಿನ ವಿಷಯದಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಷ್ ಅವರೆಲ್ಲರೂ ಭಾಗವಹಿಸುತ್ತಿದ್ದರು. ಈಗ ಶಿವಣ್ಣ ಅವರು ಬಂದರೆ ನಮಗೆ ಸ್ಫೂರ್ತಿ ಮತ್ತು ಧೈರ್ಯ ಬರುತ್ತೇ ಎಂದು ಅಭಿಪ್ರಾಯಪಟ್ಟರು.
Advertisement
Advertisement
ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಖಂಡಿತವಾಗಿ ಬರಬೇಕು. ಇಂತಹ ಕಾರ್ಯಕ್ರಮಗಳನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತ ಎಂದು ಭಾವಿಸಬಾರದು. ಯಾವುದೇ ರೀತಿಯ ರಾಜಕೀಯ ಇಲ್ಲಿ ಬರಬಾರದು. ನಾನು ಕೂಡಾ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾನು ಡಿಕೆಶಿಯವರ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಾವು ಯಾವ ರಾಜಕೀಯ ಪಕ್ಷದ ಸದಸ್ಯತ್ವ ತೆಗೆದುಕೊಂಡಿಲ್ಲ. ಇದು ಕನ್ನಡದ ಜನತೆಗಾಗಿ ಆಗಬೇಕಾದ ಕೆಲಸ ಎಂದು ನಾವು ಪರಿಗಣಿಸಬೇಕಾಗುತ್ತದೆ. ಇದರಿಂದ ಯಾರಿಗಾದರೂ ತೊಂದರೆಯಾಗುತ್ತಾ? ಯಾರಿಗೂ ಏನೂ ತೊಂದರೆ ಆಗುವುದಿಲ್ಲ. ಎಲ್ಲ ಕೈಗಳು ಸೇರಿದಾಗ ಒಂದು ಶಕ್ತಿ ಬರುತ್ತೇ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ
Advertisement
ವೀಕೆಂಡ್ ಕಫ್ರ್ಯೂ ಕುರಿತು ಮಾತನಾಡಿ, 3 ವರ್ಷದಿಂದ ಕಫ್ರ್ಯೂ ಮಾಡುತ್ತಲೇ ಇದ್ದಾರೆ. ಲಾಕ್‍ಡೌನ್ ಆಗುತ್ತಲೇ ಇದೆ. ಕೊರೊನಾ 1ನೇ ಅಲೆ ಏನಾಯಿತು, 2 ನೇ ಅಲೆ ಏನಾಯಿತು? ಹೇಗಿದೆ ಈಗಿನ ಪರಿಸ್ಥಿತಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಜನರ ಒಳ್ಳೆಯದಾಗಲೆಂದು ಕಫ್ರ್ಯೂ ವಿಧಿಸಿದರೆ ತಪ್ಪೇನಿಲ್ಲ. ಕಫ್ರ್ಯೂ ಹಾಕಿರುವುದು ಸರಿಯಾಗಿದೆಯೇ? ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡಲಾಗುತ್ತಿದೆ. ಈ ಪಾದಯಾತ್ರೆಗೆ ಯಾರು ಬರತ್ತಾರೋ ಗೊತ್ತಿಲ್ಲ, ನಾನಂತು ಅಣೆಕಟ್ಟು ಶುರುವಾಗುವವರೆಗೂ ಜೊತೆಯಲ್ಲಿ ಇರುತ್ತೇನೆ ಎಂದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಚಾಲನೆ