ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರಕ್ಕೆ ದರ್ಶನ್ ಭೇಟಿಗೆ ಅವಕಾಶ ಸಿಗದೇ ಸಾಧುಕೋಕಿಲ (Sadhu ವಾಪಸ್ ಆಗಿದ್ದಾರೆ. ಇದನ್ನೂ ಓದಿ:Suriya 44: ಗ್ಯಾಂಗ್‌ಸ್ಟರ್ ಅವತಾರದಲ್ಲಿ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ
ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪಸ್ ಆದ ಸಾಧುಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಾನು ಇಂದು ಭೇಟಿ ಮಾಡಿದರೆ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡುತ್ತೇನೆ ಎಂದು ಮಾತನಾಡಿದ್ದಾರೆ.
ಇನ್ನೂ ವಾರಕ್ಕೆ ಎರಡೇ ವಿಸಿಟ್‌ಗೆ ಅವಕಾಶ ಇರುವ ಹಿನ್ನೆಲೆ ಆದರೆ ದರ್ಶನ್ ಭೇಟಿಗೆ ಸಾಧುಕೋಕಿಲಗೆ ಅವಕಾಶ ಸಿಕ್ಕಿಲ್ಲ. ಈ ವಾರ ಈಗಾಗಲೇ ಒಂದು ಬಾರಿ ದಿನಕರ್ ತೂಗುದೀಪ್ ಕುಟುಂಬ ಜೈಲಿಗೆ ಭೇಟಿ ನೀಡಿದ್ದು, ಇವರ ಜೊತೆ ವಿನೋದ್ ರಾಜ್ ಕೂಡ ಭೇಟಿಯಾಗಿದ್ದಾರೆ.