ತಮಿಳಿನ ಜೈಲರ್ (Jailer) ಸಿನಿಮಾದ ಶೂಟಿಂಗ್ ಮಂಗಳೂರಿನಲ್ಲಿ (Mangalore) ನಡೆಯುತ್ತಿದ್ದು, ಸಿನಿಮಾದ ನಾಯಕ ರಜನಿಕಾಂತ್ ಈಗಾಗಲೇ ಮೂರು ದಿನಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ಕೇವಲ ಶಿವರಾಜ್ ಕುಮಾರ್ ಮಾತ್ರವಲ್ಲ, ಸಾಧು ಕೋಕಿಲಾ ಕೂಡ ಪಾತ್ರ ಮಾಡುತ್ತಿರುವುದು ವಿಶೇಷ.
Advertisement
ಸಿನಿಮಾದ ಶೂಟಿಂಗ್ ಮಂಗಳೂರಿನ ಪಿಲಿಕುಳದ (Pilikula) ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ರಜನಿಕಾಂತ್ (Rajinikanth), ಶಿವರಾಜ್ ಕುಮಾರ್ (Shivraj Kumar) ಜೊತೆ ಸಾಧು ಕೋಕಿಲಾ (Sadhu Kokila) ಕೂಡ ಭಾಗಿಯಾಗಿದ್ದಾರೆ. ಪಿಲಿಕುಳದಲ್ಲಿ ಕರಾವಳಿಯನ್ನು ಬಿಂಬಿಸುವಂತಹ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ. ಮಾಹಿತಿಯ ಪ್ರಕಾರ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನೆಗೆಟಿವ್ ಶೇಡ್ ಇರುವಂತಹ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ.
Advertisement
Advertisement
ಪಿಲಿಕುಳದ ಗುತ್ತಿನ ಮನೆಯು ಮಂಗಳೂರು ಹೊರವಲಯದಲ್ಲಿದ್ದು, ಇಲ್ಲಿ ಜೈಲರ್ ಸಿನಿಮಾಗಾಗಿಯೇ ವಿಶೇಷ ಸೆಟ್ ಅನ್ನು ಹಾಕಲಾಗಿದೆ. ಹಳ್ಳಿಯ ವಾತಾವರಣವನ್ನು ಬಿಂಬಿಸುವಂತಹ ಮತ್ತು ಕುಸ್ತಿ ಅಖಾಡವನ್ನು ಕೂಡ ಮನೆ ಒಳಗೆ ಸೃಷ್ಟಿ ಮಾಡಲಾಗಿದೆ. ಎತ್ತಿನ ಗಾಡಿ ಸೇರಿದಂತೆ ಹಲವು ಹಳ್ಳಿ ಸಂಸ್ಕೃತಿಯನ್ನು ಬಿಂಬಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಮದುವೆಯ ಬಳಿಕ ಸಿಹಿ ಸುದ್ದಿ ನೀಡಿದ ಸಿದ್-ಕಿಯಾರಾ ಜೋಡಿ
Advertisement
ಇದೇ ಸ್ಥಳದಲ್ಲೇ ಎರಡು ದಿನಗಳ ಕಾಲ ಜೈಲರ್ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಕುಸ್ತಿ ದೃಶ್ಯ ಸೇರಿದಂತೆ ಮಹತ್ವದ ಹಲವು ಸನ್ನಿವೇಶಗಳನ್ನು ಪಿಲಿಕುಳದ ಗುತ್ತಿನ ಮನೆಯ ಆವರಣದಲ್ಲೇ ಚಿತ್ರೀಕರಣ ಮಾಡಲಾಗುತ್ತದೆ. ಎರಡು ದಿನಗಳ ಹಿಂದೆಯೇ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಅವರ ಟೀಮ್ ಸೇರಿಕೊಂಡಿದ್ದಾರೆ. ರಜನಿ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ಈಗಾಗಲೇ ಭಾರೀ ವೈರಲ್ ಆಗಿದೆ.
ಇದು ರಜನಿಕಾಂತ್ ನಟನೆಯ 169ನೇ ಸಿನಿಮಾವಾಗಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದರೆ, ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಹಲವು ಚಿತ್ರರಂಗದ ದಿಗ್ಗಜರು ಈ ಸಿನಿಮಾಗಾಗಿ ಒಂದಾಗಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k