ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್’ (Oh My God) ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಥಿಯೇಟರ್ ನಲ್ಲಿ ಬಿಡುಗಡೆಗೂ ಮುನ್ನ ಸದ್ಗುರು ಜಗ್ಗಿ ವಾಸುದೇವ (Sadhguru Jaggi Vasudeva) ಸಿನಿಮಾವನ್ನು ವೀಕ್ಷಿಸಿದ್ದಾರೆ. ಸಿನಿಮಾ ಕುರಿತಾಗಿ ಅವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ವಿವಾದಿತ ಮತ್ತು ಸಲಿಂಗ ಕಾಮದ ಕುರಿತಾದ ಸಿನಿಮಾವನ್ನು ಸದ್ಗುರು ನೋಡಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ.
ಈ ಸಿನಿಮಾವನ್ನು ಸದ್ಗುರುಗೆ ತೋರಿಸುವುದಕ್ಕಾಗಿಯೇ ಅಕ್ಷಯ್ ಕುಮಾರ್ ಇಶಾ ಫೌಂಡೇಶನ್ ನಲ್ಲೇ ವ್ಯವಸ್ಥೆ ಮಾಡಿದ್ದರು. ಜೊತೆಗೆ ಅಕ್ಷಯ್ ಕುಮಾರ್ ಅಲ್ಲಿಗೆ ಹೋಗಿದ್ದರು. ಈ ಸಿನಿಮಾದ ಮೂಲಕ ಲೈಂಗಿಕ ಶಿಕ್ಷಣದ ಬಗ್ಗೆ ಹೇಳಲು ಹೊರಟಿರುವುದರಿಂದ ಜಗ್ಗಿ ವಾಸುದೇವ ಅವರ ಅಭಿಪ್ರಾಯ ಕೇಳಲೂ ಚಿತ್ರತಂಡ ಮುಂದಾಗಿತ್ತು, ಇಡೀ ಸಿನಿಮಾವನ್ನು ಸದ್ಗುರು ಮೆಚ್ಚಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನೂ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಬಂಪರ್ ಆಫರ್, ವಿಕ್ರಮ್‌ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ
ಚಿತ್ರದ ಕುರಿತು ಜಗ್ಗಿ ವಾಸುದೇವ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತಮ್ಮ ಅಭಿಪ್ರಾಯದಲ್ಲಿ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ‘ಮಹಿಳೆಯರನ್ನು ಘನತೆಯಿಂದ ಕಾಣುವಂತಹ, ಅವರ ಸುರಕ್ಷತೆಯನ್ನು ಬಯಸುವಂತಹ ಸಮಾಜ ಕಟ್ಟಲು ನಾವು ಹೊರಟಿದ್ದೇವೆ. ಇಂತಹ ಸಮಯದಲ್ಲಿ ನಾವು ದೈಹಿಕ ಅಗತ್ಯತೆಗಳ ಕುರಿತಾಗಿಯೂ ಶಿಕ್ಷಣ ಕೊಡಬೇಕಿದೆ. ಅಂತಹ ಶಿಕ್ಷಣವನ್ನು ಈ ಸಿನಿಮಾದಲ್ಲಿ ಕೊಡಲು ಹೊರಟಿದ್ದೀರಿ’ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅವರು ಸಿನಿಮಾ ತೋರಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನೂ ಈ ಸಂದರ್ಭದಲ್ಲಿ ಸದ್ಗುರು ತಿಳಿಸಿದ್ದಾರೆ. ಜಗ್ಗಿ ವಾಸುದೇವ ಅವರು ಪ್ರತಿಕ್ರಿಯೆಗೆ ಅಕ್ಷಯ್ ಕುಮಾರ್ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ.
Web Stories