ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರು ಮೆದುಳು ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇಂದು ಸದ್ಗುರು ಅವರನ್ನು ಭೇಟಿ ಮಾಡಿದ ಕಂಗನಾ, ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಐಸಿಯು ಬೆಡ್ ಮೇಲೆ ಸದ್ಗುರು ನೋಡಿದೆ. ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನ ತಲೆ ತಿರುಗಿತು. ದೇವರೇ ಕುಸಿದಂತೆ ಭಾಸವಾಯಿತು ಎಂದು ಬರೆದುಕೊಂಡಿದ್ದಾರೆ.
Advertisement
ಲಕ್ಷಾಂತರ ಭಕ್ತರು ನನ್ನಂತೆಯೇ ದುಃಖವನ್ನು ಹಂಚಿಕೊಳ್ಳಲಿದ್ದಾರೆ. ಅವರು ಆರೋಗ್ಯವಾಗಿ ಮತ್ತೆ ನಮ್ಮೊಂದಿಗೆ ಇರಲಿದ್ದಾರೆ. ಹಾಗಾಗದೇ ಇದ್ದರೆ ಸೂರ್ಯ ಬೆಳಗಲ್ಲ, ಭೂಮಿ ಚಲಿಸುವುದಿಲ್ಲ ಎಂದು ಭಾವುಕರಾಗಿಯೇ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
Advertisement
Advertisement
ನಿನ್ನೆ ಸದ್ಗುರು ಜಗ್ಗಿ ವಾಸುದೇವ್ ( Sadhguru Jaggi Vasudev) ಅವರು ಆಸ್ಪತ್ರೆಗೆ ದಾಖಲಾಗಿದ್ದರು. 66 ವರ್ಷದ ಸದ್ಗುರು ಮೆದುಳಿನಲ್ಲಿ ಭಾರೀ ಊತ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದರು. ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ (Emergency brain surgery) ನಡೆಸಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಇಶಾ ಫೌಂಡೇಶನ್ ಸಾಮಾಜಿಕ ಜಾಲತಾಣದ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ.
Advertisement
ಕಳೆದ ನಾಲ್ಕು ವಾರಗಳಿಂದ ಸದ್ಗುರು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. 2024 ರ ಮಾರ್ಚ್ 14 ರಂದು ಅವರು ಮಧ್ಯಾಹ್ನದ ವೇಳೆಗೆ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ವಿಪರೀತ ತಲೆನೋವಿನಿಂದ ಬಳಲಿದ್ದಾರೆ. ಹೀಗಾಗಿ ಅದೇ ದಿನ ಸಂಜೆ 4.30 ಕ್ಕೆ ಸದ್ಗುರುಗಳನ್ನು ತುರ್ತು MRI ಗೆ ಒಳಪಡಿಸಲಾಯಿತು. ಈ ವೇಳೆ ರಕ್ತಸ್ರಾವವಾಗುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಜಗ್ಗಿ ವಾಸುದೇವ್, ನಾನು ಸದ್ಯ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಇಲ್ಲಿಯ ನ್ಯೂರೋ ಸರ್ಜನ್ ನನ್ನ ತಲೆಯಲ್ಲಿ ಹೇನು ಹುಡುಕಲು ಹೋಗಿದ್ದರು. ಆದರೆ ಅವರಿಗೆ ಹೇನು ಸಿಗಲಿಲ್ಲ. ಕೊನೆಗೆ ತಲೆಗೆ ಬ್ಯಾಂಡೇಜ್ ಹಾಕಿದ್ದು, ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬರೆದುಕೊಂಡಿದ್ದರು.