ಸದ್ಗುರು ಜಗ್ಗಿ ವಾಸುದೇವ್‌ಗೆ ಮೆದುಳಿನ ಶಸ್ತ್ರಚಿಕಿತ್ಸೆ!

Public TV
1 Min Read
Sadhguru

ನವದೆಹಲಿ: ಆಧ್ಯಾತ್ಮಿಕ ಗುರು ಮತ್ತು ಇಶಾ ಫೌಂಡೇಶನ್‌ನ ಸಂಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್ (  Sadhguru Jaggi Vasudev) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

66 ವರ್ಷದ ಸದ್ಗುರು ಮೆದುಳಿನಲ್ಲಿ ‌ಭಾರೀ ಊತ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದಾರೆ. ಸದ್ಯ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ (Emergency brain surgery) ನಡೆಸಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಇಶಾ ಫೌಂಡೇಶನ್‌ ಸಾಮಾಜಿಕ ಜಾಲತಾಣದ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ.

ಕಳೆದ ನಾಲ್ಕು ವಾರಗಳಿಂದ ಸದ್ಗುರು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. 2024 ರ ಮಾರ್ಚ್ 14 ರಂದು ಅವರು ಮಧ್ಯಾಹ್ನದ ವೇಳೆಗೆ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ವಿಪರೀತ ತಲೆನೋವಿನಿಂದ ಬಳಲಿದ್ದಾರೆ. ಹೀಗಾಗಿ ಅದೇ ದಿನ ಸಂಜೆ 4.30 ಕ್ಕೆ ಸದ್ಗುರುಗಳನ್ನು ತುರ್ತು MRI ಗೆ ಒಳಪಡಿಸಲಾಯಿತು. ಈ ವೇಳೆ ರಕ್ತಸ್ರಾವವಾಗುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: 58ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ ಸಿಧು ಮೂಸೇವಾಲಾ ತಾಯಿಗೆ ಸಂಕಷ್ಟ!

 

View this post on Instagram

 

A post shared by Sadhguru (@sadhguru)

ಈ ಸಂಬಂಧ ಪ್ರತಿಕ್ರಿಯಿಸಿರುವ ಜಗ್ಗಿ ವಾಸುದೇವ್, ನಾನು ಸದ್ಯ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಇಲ್ಲಿಯ ನ್ಯೂರೋ ಸರ್ಜನ್ ನನ್ನ ತಲೆಯಲ್ಲಿ ಹೇನು ಹುಡುಕಲು ಹೋಗಿದ್ದರು. ಆದರೆ ಅವರಿಗೆ ಹೇನು ಸಿಗಲಿಲ್ಲ. ಕೊನೆಗೆ ತಲೆಗೆ ಬ್ಯಾಂಡೇಜ್ ಹಾಕಿದ್ದು, ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.

Share This Article