ತಿರುವನಂತಪುರಂ: ಮೀನು ಸಾವನ್ನಪ್ಪಿದ್ದಕ್ಕೆ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಪೊನ್ನಾಯಿಯ ಚಂಗರಂಕುಲಂನಲ್ಲಿ ನಡೆದಿದೆ.
ರೋಷನ್ ಮೆನನ್ (13) ಮೃತ ಬಾಲಕ. ರೋಶನ್ ಮೂಕುತಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ. ಜೊತೆಗೆ ಆತನಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅಕ್ವೇರಿಯಂ ಇತ್ತು. ಅಕ್ವೇರಿಯಂಯಲ್ಲಿ (Aquarium) ಸಾಕಿದ್ದ ಮೀನು (Fish) ಹಿಂದಿನ ದಿನ ಸಾವನ್ನಪ್ಪಿತ್ತು. ಇದರಿಂದಾಗಿ ರೋಷನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.
ಮರುದಿನ ರೋಷನ್ ಪಾರಿವಾಳಕ್ಕೆ ಆಹಾರ ನೀಡಲು ಮನೆಯಿಂದ ಹೊರಗೆ ಬಂದಿದ್ದ. ಅದಾದ ಬಳಿಕ ಒಂದು ಗಂಟೆಯಾದರೂ ರೋಷನ್ ಮನೆಗೆ ಮರಳಿ ಬಂದಿಲ್ಲ. ಜೊತೆಗೆ ಮನೆಯ ಸುತ್ತಮುತ್ತಲೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ಆತಂಕಗೊಂಡು ರೋಷನ್ ಕುಟುಂಬಸ್ಥರು ಹುಡಕಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: MLC ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ
ಅವರ ಕುಟುಂಬವು ಮಹಡಿಗೆ ಹೋದಾಗ ಟೆರೇಸ್‍ನಲ್ಲಿ ರೋಷನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದದ ಹುಡುಗಿ ಫೋಟೋ ತೋರಿಸಿ 50 ಸಾವಿರಕ್ಕೆ ಬೇಡಿಕೆ- ಬೆಂಗ್ಳೂರಲ್ಲಿ ಹೈಫೈ ವೇಶ್ಯಾವಾಟಿಕೆ