ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸ್ಯಾಡ್ ನ್ಯೂಸ್

Public TV
1 Min Read
rakshith shetty 2

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೊರಬರುವ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ಯಾಡ್ ನ್ಯೂಸ್ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗುತ್ತಿದ್ದರು. ತಮ್ಮ ವೈಯಕ್ತಿಕ ಹಾಗೂ ಸಿನಿಮಾಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಸದ್ಯ ಈಗ ರಕ್ಷಿತ್ ತಮ್ಮ ಸಾಮಾಜಿಕ ಜಾಲತಾಣದಿಂದ ಹೊರಬಂದಿದ್ದಾರೆ.

ರಕ್ಷಿತ್ ಸಾಮಾಜಿಕ ಜಾಲತಾಣದಿಂದ ಹೊರಬರುವ ಮೊದಲು ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. “ನಾನು ಸಾಮಾಜಿಕ ಜಾಲತಾಣಗಳಿಂದ ಹೊರನಡೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ನನಗೆ ನೀವು ಅತ್ಯಧಿಕ ಪ್ರೀತಿ ತೋರಿಸಿದ್ದೀರಿ. ಅದಕ್ಕೆ ನನ್ನ ಧನ್ಯವಾದ. ಲವ್ ಯು ಆಲ್” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

rakshith shetty

ರಕ್ಷಿತ್ ಟ್ವಿಟ್ಟರ್, ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಅಧಿಕೃತ ಖಾತೆ ತೆರೆದು ಅದನ್ನು ಬಳಸುತ್ತಿದ್ದರು. ಆದ್ರೆ ಇದೀಗ ರಕ್ಷಿತ್ ಶೆಟ್ಟಿ ಅವರ ಈ ಮೂರು ಖಾತೆ ಚಾಲ್ತಿಯಲ್ಲಿ ಇಲ್ಲ. ಟ್ವಿಟ್ಟರ್, ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂ ಅಧಿಕೃತ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಈಗ ಇವರ ಹೆಸರಿನಲ್ಲಿ ಕೆಲ ಆಫೀಶಿಯಲ್ ಖಾತೆಗಳಿವೆ. ಈ ಖಾತೆಗಳ ಮೂಲಕ ರಕ್ಷಿತ್ ಅವರ ಅಭಿಮಾನಿಗಳು ಅವರ ವೈಯಕ್ತಿಕ ಹಾಗೂ ಸಿನಿಮಾದ ಸುದ್ದಿಗಳ ಬಗ್ಗೆ ತಿಳಿದುಕೊಳ್ಳಬಹುದು.

rakshith shetty

ರಕ್ಷಿತ್ ತಮ್ಮ ಸಿನಿಮಾ ಪ್ರಮೋಶನ್, ಫ್ಯಾನ್ಸ್ ಜೊತೆ ಮಾತುಕತೆ, ವೈಯಕ್ತಿಕ ವಿಚಾರಗಳು ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. `ಸಿನಿಮಾ ಚೆನ್ನಾಗಿಲ್ಲ ಅಂತ ರಿಪೋರ್ಟ್ ಕೊಟ್ಟರೆ, 3 ಗಂಟೆ ಸಿನಿಮಾ ನೋಡಿ ವಿಮರ್ಶೆ ಬರೆಯುವವರಿಗೆ ಏನ್ ಗೊತ್ತಿರುತ್ತೆ ಸಿನಿಮಾ ಮಾಡುವವರ ಕಷ್ಟ’ ಎಂದು ಖಡಕ್ ಸೂಚನೆ ನೀಡುತ್ತಿದ್ದರು. ಸದ್ಯ ರಕ್ಷಿತ್ ಕಳೆದ 20 ದಿನಗಳಿಂದಲೂ ಸಾಮಾಜಿಕ ಜಾಲತಾಣದಿಂದ ಕೊಂಚ ದೂರ ಉಳಿದಿದ್ದು, ಕಳೆದ ಭಾನುವಾರ ತಮ್ಮ ಸಾಮಾಜಿಕ ಖಾತೆಗಳನ್ನು ಡಿಆಕ್ಟಿವೇಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *