ಬೆಂಗಳೂರು: ಫೇಶಿಯಲ್, ಥ್ರೆಡ್ಡಿಂಗ್, ಲೇಸರ್ ಟ್ರೀಟ್‍ಮೆಂಟ್, ಮೊಡವೆಗೆ ಬ್ಲೀಚಿಂಗ್ ಅಂತಾ ಬ್ಯೂಟಿಪಾರ್ಲರ್ ಎಡೆತಾಕುವ ಲೇಡಿಸ್‍ಗಳಿಗೆ ಇದು ಬೇಸರದ ಸುದ್ದಿ. ಯಾಕೆಂದರೆ ಬ್ಯೂಟಿ ಪಾರ್ಲರ್ ಗಳಿಗೆ ಮೇಜರ್ ಸರ್ಜರಿ ಮಾಡೋದಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ದೊಡ್ಡ ಬೆಳವಣಿಕೆ ನಡೆದಿದೆ.
ಮುಖದಲ್ಲಿ ಮೊಡವೆ ಇದ್ದರೆ, ಟ್ಯಾನ್ ಆಗಿದ್ದರೆ, ತಲೆಗೂದಲು ಉದುರುವಿಕೆಗೆ ಹೆಣ್ಮಕ್ಕಳು ನೇರವಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಾರೆ. ಆದರೆ ಇನ್ನು ಮುಂದೆ ಹೀಗೆ ಡೈರೆಕ್ಟಾಗಿ ಹೋಗೋದಕ್ಕೆ ಸಾಧ್ಯವಿಲ್ಲ. ಏಕೆಂದರೆ ಪಾರ್ಲರ್ ಗಳಿಗೆ ಬ್ರೇಕ್ ಹಾಕಿ ಅಂತಾ ವೈದ್ಯರು ಫೈಟ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಚರ್ಮದ ವೈದ್ಯರು ಎಲ್ಲಾ ಕೇಂದ್ರ ಆರೋಗ್ಯ ಇಲಾಖೆಗೆ ಬ್ಯೂಟಿ ಪಾರ್ಲರ್‌ಗೆ ಮೊದಲು ಕಾಯ್ದೆ ತನ್ನಿ ಎಂದು ಮನವಿ ಮಾಡಿದ್ದಾರೆ.
Advertisement
ಸದ್ಯದಲ್ಲಿಯೇ ರಾಜ್ಯದಲ್ಲಿ ಬ್ಯೂಟಿಪಾರ್ಲರ್ ಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಮಡಿಕೇರಿಯಲ್ಲಿ ಬ್ಯೂಟೀಷನ್ ಎಡವಟ್ಟಿನಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯದ ಚರ್ಮರೋಗ ತಜ್ಞರ ತಂಡ ಕೇಂದ್ರ ಆರೋಗ್ಯ ಇಲಾಖೆಗೆ ದೂರು ನೀಡಿದೆ.
Advertisement
Advertisement
ಬ್ಯೂಟೀಷನ್‍ಗಳು ವೈದ್ಯರಾಗುತ್ತಿದ್ದಾರೆ. ಅವರಿಗೆ ಯಾವುದೇ ಕಾನೂನು ಇಲ್ಲ. ಪಾರ್ಲರ್ ಗಳಲ್ಲಿ ಲೇಸರ್ ಟ್ರೀಟ್‍ಮೆಂಟ್ ಸೇರಿದಂತೆ, ಚರ್ಮರೋಗಕ್ಕೆ ಅವರೇ ಕ್ರೀಮ್ ಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಅಂತಾ ವೈದ್ಯರೆಲ್ಲ ದೂರು ಕೊಂಡೊಯ್ದಿದ್ದಾರೆ
Advertisement
ಕೇಂದ್ರ ಆರೋಗ್ಯ ಇಲಾಖೆ ವೈದ್ಯರ ಮನವಿಗೆ ಸಕಾರತ್ಮಾಕವಾಗಿ ಸ್ಪಂದಿಸಿದ್ದು, ರಾಜ್ಯದಲ್ಲಿ ಬ್ಯೂಟಿ ಪಾರ್ಲರ್ ಗಳ ಮೇಲೆ ಕಾಯ್ದೆ ತರುವ ಸಾಧ್ಯತೆ ಇದೆ ಎಂದು ಚರ್ಮರೋಗ ತಜ್ಞರ ಟೀಂ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದೆ. ಇದರ ಜೊತೆಗೆ ರಾಜ್ಯದ ಆರೋಗ್ಯ ಇಲಾಖೆಯೂ ಬ್ಯೂಟಿಪಾರ್ಲರ್ ಗಳ ಮೇಲೆ ಪರಿಶೀಲನಾ ಕಾರ್ಯ ನಡೆಸಿ, ಪಾರ್ಲರ್ ಗಳ ಮೇಲೆ ನಿಗಾ ವಹಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv