ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಸ್ ನಲ್ಲಿ ಕಾರು ಓಡಿಸವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬೇಸರದ ಸುದ್ದಿ ಸಿಕ್ಕಿದೆ.
ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದ ಕಾರಣ ದರ್ಶನ್ ಕೈಗೆ ಆಪರೇಷನ್ ಆಗಿದೆ. ಆಪರೇಷನ್ ಆದ ಮರು ದಿನ ದರ್ಶನ್, ನಾನು ಇನ್ನೊಂದು ವಾರದೊಳಗೆ ರೇಸ್ ನಲ್ಲಿ ಕಾರು ಓಡಿಸಬೇಕು. ಇದು ಸಾಧ್ಯ ತಾನೇ ಎನ್ನುವ ಗಂಭೀರ ಪ್ರಶ್ನೆಯನ್ನು ವೈದ್ಯರಿಗೆ ಕೇಳಿದ್ದಾರೆ. ಅದಕ್ಕೆ ವೈದ್ಯರು, ರೇಸ್ ಇರಲಿ ನೀವು ಡ್ರೈವ್ ಕೂಡ ಮಾಡುವುದಕ್ಕೆ ಆಗುವುದಿಲ್ಲ. ಇನ್ನು ಏನಿದ್ದರೂ ಫುಲ್ ರೆಸ್ಟ್ ಮಾತ್ರ ಎಂದು ಹೇಳಿದ್ದಾರೆ.
Advertisement
ವೈದ್ಯರ ಈ ಸಲಹೆಯಿಂದಾಗಿ ಮೈಸೂರಿನಲ್ಲಿ ನಡೆಯವ ಗ್ರಾವಲ್ ಫೆಸ್ಟ್ ಕಾರ್ ರೇಸ್ ನಲ್ಲಿ ಭಾಗವಹಿಸುವ ದರ್ಶನ್ ಉತ್ಸಾಹಕ್ಕೆ ತಣ್ಣೀರು ಬಿದ್ದಂತಾಗಿದೆ. ಈ ವಿಚಾರವನ್ನು ಗ್ರಾವಲ್ ಫೆಸ್ಟ್ ಆಯೋಜಕರಾದ ಅರುಣ್ ಅರಸ್, ಫಾಲ್ಗುಣ ಅರಸ್ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ಅಪಘಾತದ ನಂತ್ರ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್
Advertisement
Advertisement
ರೇಸ್ ಗಾಗಿ ದರ್ಶನ್ 10 ದಿನಗಳ ಕಾಲ ಪ್ರಾಕ್ಟಿಸ್ ಮಾಡಿದರು. ಅದಕ್ಕಾಗಿಯೇ ವಿಶೇಷ ಡ್ರೈವಿಂಗ್ ಲೈಸನ್ಸ್ ಸಹ ಮಾಡಿಸಿದ್ದರು. ದರ್ಶನ್ 1600ಅಅ ಕಾರು ಅನ್ನು ಇಂಟರ್‍ನ್ಯಾಷನಲ್ ಓಪನ್ ವಿಭಾಗದಲ್ಲಿ ಓಡಿಸಬೇಕಿತ್ತು. ರೇಸ್‍ನಲ್ಲಿ ಭಾಗಿಯಾಗಲು ದರ್ಶನ್ ಸಾಕಷ್ಟು ಉತ್ಸಹಿಯಾಗಿದ್ದರು. ಅಪಘಾತದ ಕಾರಣದಿಂದ ಅವರು ರೇಸ್‍ನಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಭಾನುವಾರ ರೇಸ್ ವೀಕ್ಷಿಸಲು ದರ್ಶನ್ ಬರುತ್ತಾರೆ ಎಂದು ಗ್ರಾವೆಲ್ ಫೆಸ್ಟ್ ಆಯೋಜಕರು ತಿಳಿಸಿದ್ದಾರೆ.
Advertisement
ದರ್ಶನ್ ಸೆಪ್ಟೆಂಬರ್ 24 ರಂದು ಮೈಸೂರಿಂದ ಬರುತ್ತಿದ್ದಾಗ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ದರ್ಶನ್ ಅವರು ಬಲಗೈನ ಮೂಳೆ ಮುರಿದಿದ್ದು, ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ.
ದರ್ಶನ್ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ಮಾಧ್ಯಮಗಳ ಜೊತೆ ಮಾತನಾಡಿ, ದರ್ಶನ್ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಮೂಳೆ ಮುರಿದಿದೆ. ಕೆಲವು ದಿನಗಳು ವಿಶ್ರಾಂತಿ ಬೇಕಾಗುತ್ತದೆ. ಅವರು ನೋವನ್ನು ತಡೆದುಕೊಂಡು, ಅಭಿಮಾನಿಗಳಿಗೆ ಸ್ಪಂದಿಸಿದ್ದು ನೋಡಿ ಖುಷಿ ಆಯಿತು. ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv