ಅಭಿಮಾನಿಗಳಿಗೆ ಬೇಸರ ಸುದ್ದಿಯೊಂದಿಗೆ ಮಹತ್ವದ ವಿಷಯ ತಿಳಿಸಿದ ಪುನೀತ್

Public TV
1 Min Read
puneeth rajkumar video

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಅಭಿಮಾನಿಗಳಿಗೆ ಬೇಸರ ಸುದ್ದಿಯೊಂದಿಗೆ ಮಹತ್ವದ ವಿಷಯ ತಿಳಿಸಿದ್ದಾರೆ.

ಮಾರ್ಚ್ 17ರಂದು ಪುನೀತ್ ರಾಜ್‍ಕುಮಾರ್ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ. ಪುನೀತ್ ತಮ್ಮ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರಿನಲ್ಲಿ ಒಂದು ವಿಡಿಯೋ ಹಾಕಿ ಅಭಿಮಾನಿಗಳ ಜೊತೆ ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಎಲ್ಲರಿಗೂ ನಮಸ್ಕಾರ. ಮಾರ್ಚ್ 16ರ ರಾತ್ರಿ ನಾನು ಊರಿನಲ್ಲಿ ಇರುವುದಿಲ್ಲ. 17ನೇ ತಾರೀಕು ಬೆಳಗ್ಗೆ ಬರುತ್ತಿದ್ದೇನೆ. ಹಾಗಾಗಿ ದಯವಿಟ್ಟು ಯಾರೂ ಮನೆ ಹತ್ತಿರ ಬರಲು ಹೋಗಬೇಡಿ ಏಕೆಂದರೆ ನಾನು ಊರಿನಲ್ಲಿ ಇರುವುದಿಲ್ಲ. ಹಾರ, ಕೇಕ್ ಹಾಗೂ ಹೂಗುಚ್ಚ ಅದನ್ನೆಲ್ಲಾ ತರಬೇಡಿ. ಏಕೆಂದರೆ ನೀವು ನಿಮ್ಮ ಪ್ರೀತಿ, ವಿಶ್ವಾಸದಿಂದ ಹಣ ಖರ್ಚು ಮಾಡಿ ತಂದಿರುತ್ತೀರಿ. ಆದರೆ ನೀವು ಇಲ್ಲಿ ಬಂದಾಗ ಅದು ನನಗೆ ಸೇರುತ್ತೊ, ಅಲ್ಲಿ ಇಲ್ಲಿ ಹಾರಾಡುತ್ತೋ ಗೊತ್ತಿಲ್ಲ. ಇದರಿಂದ ನೀವು ಬೇಸರ ಆಗುವುದು ಬೇಡ.

puneeth rajkumar video 2

ನೀವು ಎಲ್ಲಿಂದನೋ ಬಂದು ನನ್ನನ್ನು ನೋಡಿಕೊಂಡು ಹೋಗುವುದೇ ದೊಡ್ಡ ಉಡುಗೊರೆ. ಇದು ನಾನು ಜೀವಮಾನದಲ್ಲಿ ಮರೆಯುವುದಿಲ್ಲ. ಆ ಪ್ರೀತಿ, ವಿಶ್ವಾಸನೇ ನನಗೆ ನೀವು ಕೊಡುವ ದೊಡ್ಡ ಉಡುಗೊರೆ. ಅದಕ್ಕೆ ಖರ್ಚು ಮಾಡುವ ಹಣವನ್ನು ನೀವು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ. ನೀವು ಬಂದು ನಮಗೆ ನೋಡುವುದು ಅಷ್ಟೇ ಸಾಕು. ಇಷ್ಟು ವರ್ಷ ನಮ್ಮನ್ನು ಸಪೋರ್ಟ್ ಮಾಡಿ ಪ್ರೋತ್ಸಾಹಿಸಿ ಬೆಳೆಸಿದಕ್ಕೆ ಧನ್ಯವಾದಗಳು. ‘ನಟಸಾರ್ವಭೌಮ’ ಚಿತ್ರ ನೋಡಿ ಇಷ್ಟಪಟ್ಟಿದ್ದೀರಿ. ಹೀಗೆ ನಿಮಗೆ ಒಳ್ಳೆಯ ಸಿನಿಮಾಗಳನ್ನು ನೀಡುತ್ತೇವೆ. ನಿಮ್ಮ ಪ್ರೀತಿ ಹಾಗೂ ವಿಶ್ವಾಸ ನಮ್ಮ ಕುಟುಂಬದ ಮೇಲೆ ಹಾಗೂ ಚಿತ್ರರಂಗದ ಮೇಲೆ ಇರಲಿ ಎಂದು ಪುನೀತ್ ವಿಡಿಯೋದಲ್ಲಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *