ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ನಿಧನದ ಆಘಾತಕಾರಿ ಸುದ್ದಿಯನ್ನು ಕೇಳಿ ಇಡೀ ಭಾರತ ಕಂಬನಿ ಮಿಡಿದಿದೆ. ಬುಧವಾರ ತಡರಾತ್ರಿ ರತನ್ ಟಾಟಾ (86) ಕೊನೆಯುಸಿರೆಳೆದಿದ್ದಾರೆ. ಭಾರತದ ಲಕ್ಷಾಂತರ ಜನ ಸಂತಾಪ ಸೂಚಿಸುತ್ತಿದ್ದಾರೆ. ಇದಕ್ಕೆ ಕ್ರಿಕೆಟ್ ದೇವರು ತೆಂಡೂಲ್ಕರ್ ಸಹ ಕಂಬನಿ ಮಿಡಿದ್ದಾರೆ. ಟಾಟಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಟಾಟಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಈ ನಡುವೆ ಸಚಿನ್ ( Sachin Tendulkar) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ರತನ್ ಟಾಟಾ ಅವರೊಂದಿಗಿ ಭೇಟಿಯನ್ನು ನೆನಪು ಮಾಡಿಕೊಂಡಿದ್ದಾರೆ. ಅವರ ಜೊತೆಗಿನ ಫೋಟೋದೊಂದಿಗೆ ಭಾವನಾತ್ಮಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ. ಅವರೊಂದಿಗೆ ನಾನು ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ನಾನು ಅದೃಷ್ಟಶಾಲಿಯಾಗಿದ್ದೇನೆ. ಆದರೆ ಅವರನ್ನ ಭೇಟಿಯಾಗದ ಲಕ್ಷಾಂತರ ಜನರು ಅನುಭವಿಸುವ ದುಃಖವನ್ನು ಇಂದು ನಾನೂ ಅನುಭವಿಸುತ್ತಿದ್ದೇನೆ. ಅಂತಹ ಪ್ರಭಾವಿ ವ್ಯಕ್ತಿ ಅವರು. ಟಾಟಾ ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್ ಉತ್ತರ ಇದು
Advertisement
View this post on Instagram
Advertisement
ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohith Sharma) ಕೂಡ ರತನ್ ಟಾಟಾ ಅವರ ಅಗಲಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. ಸರ್ ನೀವು ಚಿನ್ನದಂತ ಹೃದಯ ಹೊಂದಿರುವ ವ್ಯಕ್ತಿ. ನೀವು ನಿಜವಾಗಿಯೂ ಕಾಳಜಿವಹಿಸುವ ಮತ್ತು ಎಲ್ಲರ ಜೀವನ ಉತ್ತಮಗೊಳಿಸಲು ತನ್ನ ಜೀವನ ನಡೆಸಿದ ವ್ಯಕ್ತಿಯಾಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತೀರಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅನೇಕರು ಕೂಡ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರತನ್ ಟಾಟಾರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ
Advertisement
Advertisement
ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಅಂತಿಮ ದರ್ಶನಕ್ಕಿಡಲಾಗಿದೆ. ಸಂಜೆ 4ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ರತನ್ ಟಾಟಾ