ಮುಂಬೈ: ಇತ್ತೀಚೆಗೆ ವೈರಲ್ ಆಗಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಡೀಪ್‍ಫೇಕ್ (Deepfake) ವೀಡಿಯೋ ಸಂಬಂಧ ಮುಂಬೈ (Mumbai) ಪೊಲೀಸರು (Police) ಗೇಮಿಂಗ್ ಅಪ್ಲಿಕೇಶನ್ ಹಾಗೂ ಫೇಸ್‍ಬುಕ್ ಪುಟವೊಂದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ಆನ್‍ಲೈನ್ ಗೇಮ್‍ವೊಂದರ ಮೂಲಕ ದೊಡ್ಡ ಮೊತ್ತದ ಹಣವನ್ನು ಗೆದ್ದಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗಿತ್ತು. ಅಲ್ಲದೇ ಸಚಿನ್ ಗೇಮಿಂಗ್ ಅಪ್ಲಿಕೇಷನ್‍ನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರ ಧ್ವನಿ ಹಾಗೂ ಅವರ ವೀಡಿಯೋ ಬಳಸಿ ಹಂಚಿಕೊಳ್ಳಲಾಗಿತ್ತು. ಇದನ್ನು ಸಚಿನ್ ಅವರ ಟ್ವಿಟ್ಟರ್ ಮೂಲಕವೂ ಫ್ಲಾಗ್ ಮಾಡಲಾಗಿತ್ತು. ಇದನ್ನೂ ಓದಿ: ರಾಯಚೂರಿನಿಂದ ರಾಮಭಕ್ತನ ಪಾದಯಾತ್ರೆ: ರಾಮಮಂದಿರ ತಲುಪಲು 250 ಕಿ.ಮೀ ಬಾಕಿ
Advertisement
Advertisement
ಈ ಬಗ್ಗೆ ಸಚಿನ್ ಆಪ್ತ ಸಹಾಯಕರೊಬ್ಬರು ನೀಡಿದ ದೂರಿನ ಅಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 500ರ ಅಡಿ (ಮಾನನಷ್ಟ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66ರ (ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವುದು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಗೇಮಿಂಗ್ ಸೈಟ್ ಮತ್ತು ಫೇಸ್‍ಬುಕ್ ಪುಟದ ಮಾಲೀಕರ ಬಗ್ಗೆ ಪೊಲೀಸರು ವಿವರಗಳನ್ನು ಹಂಚಿಕೊಂಡಿಲ್ಲ.
Advertisement
Advertisement
ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ತೆಂಡೂಲ್ಕರ್ ಇದು ನಕಲಿ ವೀಡಿಯೋ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ತಂತ್ರಜ್ಞಾನಗಳ ದುರುಪಯೋಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸೂಕ್ತ ಕ್ರಮಗಳು ಅವಶ್ಯಕವಾಗಿ ಬೇಕು ಎಂದು ಆಗ್ರಹಿಸಿದ್ದರು. ಇದನ್ನೂ ಓದಿ: ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್- ವಿಜ್ಞಾನ ಸಾಹಿತ್ಯ ಹಬ್ಬದಲ್ಲಿ ಮಿಂಚಿದ ಕನ್ನಡ