ಮುಂಬೈ: ಭಾರತೀಯ ಕ್ರಿಕೆಟ್ ತಂಡದ ದಂತಕತೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಲಂಡನ್ ವಿವಿಯಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ.
ಪದವಿ ಪಡೆದ ಸಂತಸ ಕ್ಷಣಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಸಾರಾ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿನ್ ಕೂಡ ತಮ್ಮ ಪುತ್ರಿಯ ಜೊತೆಗಿನ ಫೋಟೋಗಳನ್ನು ಟ್ವೀಟ್ ಮಾಡಿ ಶುಭಕೋರಿದ್ದು, ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ.
It feels like just yesterday when you left home for @ucl, and now you are a Graduate. Anjali and I are so proud of you! May you go out and conquer the ???? Sara. pic.twitter.com/y9d8bpNzs3
— Sachin Tendulkar (@sachin_rt) September 7, 2018
ಮುಂಬೈ ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಓದಿದ್ದ ಸಾರಾ ಬಳಿಕ ಯುನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಲ್) ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆದಿದ್ದರು. ಅಂದಹಾಗೇ ಅಂಜಲಿ ಅವರು ಕೂಡ ಡಾಕ್ಟರ್ ಆಗಿದ್ದು, ಸದ್ಯ 20 ವರ್ಷದ ಸಾರಾ ಕೂಡ ವೈದ್ಯಕೀಯ ಪದವಿ ಪಡೆದು ತಮ್ಮ ತಾಯಿಯಂತೆ ಡಾಕ್ಟರ್ ಆಗಿದ್ದಾರೆ.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಚಿನ್ ಹಾಗೂ ಪತ್ನಿ ಅಂಜಲಿ ಕೂಡ ಸಾರಾ ಗೆ ಸಾಥ್ ನೀಡಿದ್ದಾರೆ. ಸಚಿನ್ ಟ್ವೀಟ್‍ಗೆ ಹರ್ಭಜನ್ ಹಾಗೂ ಪಾಕ್ ಮಾಜಿ ಆಟಗಾರ ಮುಷ್ತಾಕ್ ಸೇರಿದಂತೆ ಹಲವು ದಿಗ್ಗಜರು ಪ್ರತಿಕ್ರಿಯೆ ನೀಡಿ ಶುಭಕೋರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Congratulations #SaraTendulkar wish you all the best going forward.. may u achieve all your dreams.. god bless you ???? https://t.co/lHFndohGkC
— Harbhajan Turbanator (@harbhajan_singh) September 7, 2018
https://www.instagram.com/p/BnZMH55HUOE/?taken-by=saratendulkar
Many congratulations to you @sachin_rt paaji and family on Sara beta’s achievement. God bless always
— Saqlain Mushtaq (@Saqlain_Mushtaq) September 7, 2018