-ಸತತ 8 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
ಬೀದರ್: ಎರಡು ದಿನಗಳ ಸಿಐಡಿ ವಿಚಾರಣೆ ಮುಕ್ತಾಯವಾಗಿದ್ದು, ಇಂದು ಸಿಐಡಿ ತಂಡ ಕಲಬುರಗಿಗೆ ತೆರಳಿದ್ದಾರೆ.
Advertisement
ಗುತ್ತಿಗೆದಾರ ಸಚಿನ್ ಪಾಂಚಾಳ (Sachin Panchal) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಸಿಐಡಿ ತನಿಖೆ ಮುಕ್ತಾಯವಾಗಿದ್ದು, ಇಂದು (ಜ.05) ಸಿಐಡಿ ತಂಡ ಕಲಬುರಗಿಗೆ (Kalaburagi) ತೆರಳಿದೆ. ಬೀದರ್‌ನಲ್ಲಿ (Bidar) ಸತತ ಮೂರು ದಿನಗಳಿಂದ ಬಿಡುಬಿಟ್ಟಿದ್ದ ಸಿಐಡಿ ತಂಡ, ಸಚಿನ್ ಕುಟುಂಬಸ್ಥರನ್ನು ಸತತ 8 ಗಂಟೆಗಳ ಕಾಲ ತೀವ್ರ ವಿಚಾರಣೆ ಮಾಡಿ ಹೇಳಿಕೆಗಳಿನ್ನು ದಾಖಲಿಸಿದೆ. ರಾತ್ರಿ ಕುಟುಂಬಸ್ಥರ ದಾಖಲೆಗಳಿಗೆ ಸಹಿ ಪಡೆದು ಸಿಐಡಿ ತಂಡ ಎರಡು ದಿನಗಳ ತನಿಖೆ ಅಂತ್ಯಗೊಳಿಸಿದ್ದು, ಇಂದು ಕಲಬುರಗಿಗೆ ತೆರಳಿದ ತಂಡ ಸಚಿನ್ ಕಚೇರಿ ಸೇರಿದಂತೆ ಆರೋಪಿಗಳ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ.ಇದನ್ನೂ ಓದಿ: BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ
Advertisement
Advertisement
ಕಲಬುರಗಿಯಲ್ಲಿ ಡೆತ್‌ನೋಟ್‌ನಲ್ಲಿ ಸಚಿನ್ ಉಲ್ಲೇಖ ಮಾಡಿರುವ ಪ್ರಮುಖ ಆರೋಪಿ ರಾಜು ಕಪನೂರು ಸೇರಿದಂತೆ ಎಲ್ಲಾ ಆರೋಪಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ನೋಟಿಸ್ ಜೊತೆಗೆ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಅಂಡ್ ಗ್ಯಾಂಗ್ ಬಂಧನ ಸಾಧ್ಯತೆಯಿದೆ.
Advertisement
ಸಿಐಡಿ ಡಿವೈಎಸ್ಪಿ ಸುಲೇಮಾನ್ ತಹಸೀಲ್ದಾರ ನೇತೃತ್ವದ ತಂಡದಿಂದ ಬೀದರ್‌ನಲ್ಲಿ ಸಚಿನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ಎರಡು ದಿನಗಳ ಕಾಲ ತೀವ್ರ ತನಿಖೆ ಮಾಡಿದೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಮತ್ತೊಂದು ತಿರುವಿಗೆ ಕಾರಣವಾಗಿದೆ. ಸಿಐಡಿ ತನಿಖೆ ಮಾಡಿ ಆದಷ್ಟು ಬೇಗ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಲಿದೆ.
ಇನ್ನೂ (ಜ.4) `ಪಬ್ಲಿಕ್ ಟಿವಿ’ಯೊಂದಿಗೆ ಸಚಿನ್ ಸಹೋದರಿ ಸುರೇಖಾ ಮಾತನಾಡಿದ್ದು, ಸಚಿನ್ ಡೆತ್‌ನೋಟ್, ಕೊನೆಯ ಬಾರಿ ಪೋನ್ ಮಾಡಿದ್ದು ಯಾವಾಗ? ಕಪನೂರು ಬೀದರ್‌ಗೆ ಬಂದು ಧಮ್ಕಿ ಹಾಕಿದ ಬಗ್ಗೆ ಹೇಳಿಕೆ ಪಡೆದುಕೊಂಡಿದ್ದಾರೆ. ನಮ್ಮ ತನಿಖೆ ಮುಗಿದಿದೆ, ಬಳಿಕ ಕಲಬುರಗಿಗೆ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ನಮ್ಮ ಜೊತೆ ನೇರವಾಗಿ ಮಾತಾನಾಡಿಲ್ಲ. ಆದರೆ ಅವರ ಆಪ್ತರು ಬಂದು ನಮ್ಮ ಜೊತೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆನೇ ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ. ಖರ್ಗೆ ಸಾಹೇಬರು ಸದ್ಯ ಬ್ಯೂಸಿಯಾಗಿದ್ದಾರೆ. ಮುಂದಿನ ವಾರ ಬರುತ್ತಾರೆ. ಸಿಐಡಿ ತನಿಖೆಯಿಂದ ನ್ಯಾಯ ಸಿಗದಿದ್ದರೆ ಸಿಬಿಐ ತನಿಖೆ ಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡಲ್ಲ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ