ಜೈಪುರ: ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕಂಗನಾ ರಣಾವತ್ (Kangana Ranaut) ಪರ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬ್ಯಾಟಿಂಗ್ ಮಾಡಿದ್ದಾರೆ. ನಟಿ ಕಂಗನಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ ಅಧ್ಯಕ್ಷೆ ಸುಪ್ರಿಯಾ ಶ್ರೀನಾಥೆ ತಾ (Supriya Shrinate) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿನ್ ಪೈಲಟ್ (Sachin Pilot) ಅವರು, ಯಾರಾದರೂ ತಪ್ಪು ಮಾಡಿದರೆ, ತಪ್ಪು ಹೇಳಿಕೆಗಳನ್ನು ನೀಡಿದರೆ, ಯಾವುದೇ ಪಕ್ಷದವರಾಗಿದ್ದರೂ ಸರಿ ಅದನ್ನು ನಾವು ಸಹಿಸಲ್ಲ. ರಾಜಕೀಯದಲ್ಲಿ ವಾದ-ಪ್ರತಿವಾದಗಳು ಇರಬೇಕು, ಆದ್ರೆ ಭಾಷೆ ಅಸಂಸದೀಯವಾಗಿರಬಾರದು ಎಂದು ಎಚ್ಚರಿಸಿದ್ದಾರೆ.
Advertisement
Advertisement
ಇಂತಹ ದೊಡ್ಡ ಚುನಾವಣೆಯಲ್ಲಿ, ನಾವು ಸಮಸ್ಯೆಗಳತ್ತ ಗಮನ ಹರಿಸಬೇಕು. ಮತದಾರರು, ಸಾಮಾನ್ಯ ಜನರಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳನ್ನು ನಾವು ಒತ್ತಿಹೇಳಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಅಕ್ರಮ ಗೋಮಾಂಸ ಮಾರಾಟಕ್ಕೆ 60 ಕ್ಕೂ ಹೆಚ್ಚು ಗೋವುಗಳ ವಧೆ – 10 ಸಾವಿರ ಕೆಜಿ ಗೋಮಾಂಸ ಪೊಲೀಸರ ವಶಕ್ಕೆ
Advertisement
ಟೀಕಿಸಿದ ಸುಪ್ರಿಯಾಗೆ ಟಿಕೆಟ್ ಮಿಸ್:
ನಟಿ ಕಂಗನಾ ರಣಾವತ್ ಕುರಿತು ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ ಅಧ್ಯಕ್ಷೆ ಸುಪ್ರಿಯಾ ಶ್ರೀನಾಥೆ ಅವರನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಕ್ಷೇತ್ರದಿಂದ ಕಣಕ್ಕಿಳಿಸದಿರಲು ಪಕ್ಷವು ನಿರ್ಧರಿಸಿದೆ. ಅವರ ಬದಲಿಗೆ ವೀರೇಂದ್ರ ಚೌಧರಿ ಅವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಸೇತುವೆ ಮೇಲಿಂದ ಬಸ್ ಬಿದ್ದು 45 ಪ್ರಯಾಣಿಕರು ಸಾವು – 8 ವರ್ಷದ ಬಾಲಕಿ ಸೇಫ್
Advertisement
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಟಿ ಕಂಗನಾ ರಣಾವತ್ ಅವರನ್ನು ಘೋಷಿಸಿದ ನಂತರ ಸುಪ್ರಿಯಾ ಶ್ರೀನಾಥೆ ನೀಡಿದ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಸುಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ ʻಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)ʼ ಎಂದು ಬರೆದುಕೊಂಡಿದ್ದರು. ವ್ಯಾಪಕ ಜನಾಕ್ರೋಶದ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದರು. ಇದರಿಂದ ಬಿಜೆಪಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರನ್ನೂ ನೀಡಿತ್ತು. ಇದರಿಂದ ಎಚ್ಚೆತ್ತ ಕಾಂಗ್ರೆಸ್ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಿಂದ ಸುಪ್ರಿಯಾ ಅವರನ್ನು ಕೈಬಿಟ್ಟಿತು ಎಂದು ಮೂಲಗಳು ತಿಳಿಸಿವೆ.