ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಬಾಲಿವುಡ್ ನಲ್ಲಿ ಬಹುತೇಕ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಬೇರೆ ಭಾಷೆಗಳ ಡಬ್ಬಿಂಗ್ ಚಿತ್ರಗಳಿಗೆ ಹೋಲಿಸಿದರೆ, ಹಿಂದಿಯಲ್ಲೇ ಅತೀ ಹೆಚ್ಚು ದುಡ್ಡು ಮಾಡಿದೆ. ಹೀಗಾಗಿ ಕೆಜಿಎಫ್ 2 ಹಿಂದಿ ಚಿತ್ರದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ
Advertisement
ಕೆಜಿಎಫ್ ಚಾಪ್ಟರ್ ಒನ್ ಮಾಡುವಾಗ ಕೇವಲ ಅದು ಕನ್ನಡ ಸಿನಿಮಾವಾಗಿತ್ತು. ನಂತರ ತೆಲುಗು, ತಮಿಳು, ಮಲಯಾಳಂ ಭಾಷೆಗೆ ಡಬ್ ಮಾಡಲು ಪ್ಲ್ಯಾನ್ ಮಾಡಲಾಯಿತು. ಬಾಹುಬಲಿ ಸಿನಿಮಾ ಹಿಂದಿಯಲ್ಲೂ ಭರ್ಜರಿ ಯಶಸ್ಸು ಗಳಿಸಿದ ನಂತರವಷ್ಟೇ ಹಿಂದಿಯಲ್ಲೂ ಕೆಜಿಎಫ್ ಡಬ್ ಮಾಡಲು ಯೋಚನೆ ಮಾಡಿಕೊಂಡಿತ್ತು ಚಿತ್ರತಂಡ. ಕಳೆದ ಸಲ ಹಿಂದಿಯಲ್ಲಿ ನಿರೀಕ್ಷಿಸಿದಷ್ಟು ಬಾಕ್ಸ್ ಆಫೀಸ್ ನಲ್ಲಿ ಹಣ ತಂದುಕೊಡದೇ ಇದ್ದರೂ, ಕನ್ನಡದ ಸಿನಿಮಾವೊಂದು ಬಾಲಿವುಡ್ ಅಂಗಳದಲ್ಲಿ ಹವಾ ಕ್ರಿಯೇಟ್ ಮಾಡಿದ್ದನ್ನು ಮರೆಯುವಂತಿಲ್ಲ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ
Advertisement
Advertisement
ಕೆಜಿಎಫ್ 2 ಹಾಗಾಗಲಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಅಷ್ಟೂ ಭಾಷೆಗಳ ಚಿತ್ರಗಳನ್ನೂ ಹಿಂದಿಕ್ಕಿ ಭರ್ಜರಿ ಗೆಲುವು ಕಂಡಿದೆ. ನೇರವಾಗಿ ಕೆಜಿಎಫ್ 2 ಸಿನಿಮಾವನ್ನು ಹಿಂದಿಯಲ್ಲಿಯೇ ಮೇಕಿಂಗ್ ಮಾಡಿದ್ದಾರೆ ಎನ್ನುವಷ್ಟರ ಮಟ್ಟಿಗೆ ಫರ್ಫೆಕ್ಟ್ ಆಗಿ ಮೂಡಿ ಬಂದಿದೆ. ಅದಕ್ಕೆ ಕಾರಣ ಡಬ್ಬಿಂಗ್ ಆರ್ಟಿಸ್ಟ್. ಅದರಲ್ಲೂ ಯಶ್ ಪಾತ್ರಕ್ಕೆ ಡಬ್ ಮಾಡಿದ ಸಚಿನ್ ಗೋಲ್, ಪಾತ್ರಕ್ಕೆ ಸಖತ್ ಆಗಿಯೇ ಜೀವ ತುಂಬಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್
Advertisement
ಈಗಾಗಲೇ ಸಚಿನ್ ಗೋಲ್, ದಕ್ಷಿಣದ ರಜನಿಕಾಂತ್, ಧನುಷ್, ದುಲ್ಕರ್ ಸಲ್ಮಾನ್ ಹೀಗೆ ಸಾಕಷ್ಟು ಸ್ಟಾರ್ ನಟರ ಚಿತ್ರಕ್ಕೆ ಹಿಂದಿಗೆ ಡಬ್ ಮಾಡಿದವರು. ಇದೇ ಮೊದಲ ಬಾರಿಗೆ ಯಶ್ ಅವರ ಪಾತ್ರಕ್ಕೆ ವಾಯ್ಸ್ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು ‘ಸಾಮಾನ್ಯವಾಗಿ ನಾನು ನಾಲ್ಕೈದು ತಾಸುಗಳಲ್ಲಿ ಡಬ್ ಮಾಡಿ ಮುಗಿಸುತ್ತೇನೆ. ಆದರೆ, ಯಶ್ ಅವರ ಪಾತ್ರಕ್ಕೆ ಹಾಗೆ ಮಾಡಲು ಆಗಲಿಲ್ಲ. ಒಂದೊಂದು ಪದವೂ ಹಿಂದಿಯಂತೆಯೇ ತುಟಿಚಲನೆ ಕಾಣಬೇಕು ಎಂದು ನಿರ್ದೇಶಕರು ಮತ್ತು ಯಶ್ ಅವರು ಹೇಳಿದ್ದರು. ಹಾಗಾಗಿ ಒಂದು ವಾರ ಟೈಮ್ ತಗೆದುಕೊಂಡು ಡಬ್ ಮಾಡಿದೆ’ ಎಂದಿದ್ದಾರೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು
ಹಲವು ವರ್ಷಗಳಿಂದ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿರುವ ಸಚಿನ್, ಭಾರತೀಯ ಭಾಷೆಗಳ ಸಿನಿಮಾಗಳಿಗೆ ಮಾತ್ರವಲ್ಲ ಅನೇಕ ಹಾಲಿವುಡ್ ಚಿತ್ರಗಳಿಗೂ ಮಾತಿನ ಮರುಲೇಪನ ಮಾಡಿದ್ದಾರಂತೆ. ನಟನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಚಿನ್ ಅವರಿಗೆ ಇಂಥದ್ದೊಂದು ಅವಕಾಶ ಒದಗಿ ಬಂದಿದೆಯಂತೆ.