ನವದೆಹಲಿ: ಭಾರತ (India) ವೇಗವಾಗಿ ಪ್ರಗತಿ ಹೊಂದುತ್ತಿದ್ದು, ಆರ್ಥಿಕತೆ ಚುರುಕಾಗಿ ಸಾಗುತ್ತಿದೆ. ಆದ್ರೆ ʻನಾವೇ ಎಲ್ಲರ ಬಾಸ್ʼ ಅನ್ನೋ ಮನೋಭಾವ ಹೊಂದಿರುವವರು ಭಾರತದ ಈ ಬೆಳವಣಿಗೆಯನ್ನ ಸಹಿಸುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪರೋಕ್ಷವಾಗಿ ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.
#WATCH Raisen, Madhya Pradesh: Defence Minister Rajnath Singh says, “There are some people who are not happy with the speed at which India is developing. They are not liking it. ‘Sabke boss toh hum hain’, how is India growing at such a fast pace? And many are trying that the… pic.twitter.com/kucYjXnNNX
— ANI (@ANI) August 10, 2025
ಮಧ್ಯಪ್ರದೇಶದ ರಾಯ್‌ಸೆನ್ (Raisen) ಜಿಲ್ಲೆಯಲ್ಲಿಂದು ʻಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ʼನ (ಬಿಇಎಂಎಲ್) ರೈಲು ಬೋಗಿ ನಿರ್ಮಾಣ ಘಟಕದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್
ಇದೇ ವೇಳೆ 2014ರಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಈಗ ಅಗ್ರ 4ಕ್ಕೆ ಲಗ್ಗೆ ಇಟ್ಟಿದೆ. ವಿಶ್ವದಲ್ಲೇ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ರಾಷ್ಟ್ರ ಭಾರತವಾಗಿದೆ. ಭಾರತವು ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ವಿಶ್ವದಲ್ಲಿ ಯಾವುದೇ ಶಕ್ತಿಯಿಂದಲೂ ನಾವು ಸೂಪರ್ ಪವರ್ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಘರ್ಜಿಸಿದರು.
ಭಾರತದ ತ್ವರಿತ ಬೆಳವಣಿಗೆಯನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ʻನಾವೇ ಎಲ್ಲರಿಗೂ ಬಾಸ್ʼ (Sabke boss toh hum hain) ಎಲ್ಲರ ಬಾಸ್ ಎಂದು ಅವರು ಭಾವಿಸುತ್ತಾರೆ. ಭಾರತಕ್ಕೆ ಕ್ಷಿಪ್ರ ಬೆಳವಣಿಗೆ ಹೇಗೆ ಸಾಧ್ಯ? ಅದಕ್ಕಾಗಿ ಏನಾದರೂ ಮಾಡಲು ಯತ್ನಿಸುತ್ತಾರೆ. ಭಾರತದ ಉತ್ಪನ್ನಗಳನ್ನು ವಿದೇಶಗಳಲ್ಲಿ ದುಬಾರಿಯಾಗುವಂತೆ ಮಾಡುತ್ತಾರೆ ಎಂದು ಟ್ರಂಪ್ ಹೆಸರು ಉಲ್ಲೇಖಿಸದೇ ತಿರುಗೇಟು ನೀಡಿದರು. ಇದನ್ನೂ ಓದಿ: ಈ ವರ್ಷವೇ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ ರೋ-ಕೊ?
ಟ್ರಂಪ್ ಸುಂಕ ಹೆಚ್ಚಿಸಿದ್ದೇಕೆ?
ತನ್ನ ಎಚ್ಚರಿಕೆ ಬಳಿಕವು ಮಿತ್ರನಾದ ರಷ್ಯಾವನ್ನು ಬಿಟ್ಟುಕೊಡದ ಭಾರತ ತೈಲ ಖರೀದಿ ಮಾಡುವುದನ್ನು ಮಂದುವರಿಸಿತು. ಇದರಿಂದಾಗಿ 25% ವಿಧಿಸಿದ್ದ ಸುಂಕದ ಪ್ರಮಾಣವನ್ನು ಏಕಾಏಕಿ 50%ಗೆ ಹೆಚ್ಚಿಸಿತು. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ – ಆಸ್ಪತ್ರೆಗೆ ಸಾಗಿಸಲಾಗದೇ ಅಂಬುಲೆನ್ಸ್‌ನಲ್ಲೇ ಮಹಿಳೆ ಸಾವು