ತಿರುವನಂತಪುರಂ: ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣಕ್ಕೆ (Sabarimala Gold Theft Row) ಸಂಬಂಧಿಸಿದಂತೆ ದೇವಸ್ಥಾನದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ (Former Executive Officer) ಸುಧೀಶ್ ಕುಮಾರ್‌ರನ್ನು (Sudheesh Kumar) ಎಸ್‌ಐಟಿ (SIT) ಬಂಧಿಸಿದೆ. ಪ್ರಮುಖ ಆರೋಪಿ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಬಂಧನದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ತಿರುವನಂತಪುರದ ಅಪರಾಧ ಶಾಖೆಯ ಕಚೇರಿಯಲ್ಲಿ ಎಸ್‌ಐಟಿ ವಿಚಾರಣೆ ನಡೆಸಿದ ನಂತರ ಕುಮಾರ್ ಅವರನ್ನು ಬಂಧಿಸಲಾಯಿತು. ಕುಮಾರ್ 2019ರಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ದ್ವಾರಪಾಲಕ (ರಕ್ಷಕ ದೇವರು) ವಿಗ್ರಹಗಳನ್ನು ಚಿನ್ನದಿಂದ ಲೇಪಿಸಲಾಗಿದ್ದು, ದೇವಾಲಯದ ಅಧಿಕೃತ ದಾಖಲೆಗಳಲ್ಲಿ ತಾಮ್ರದ ಹಾಳೆಗಳಾಗಿ ದಾಖಲಿಸಲಾಗಿದೆ ಎಂದು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ – ಡಿಸಿಎಂ ಪರ ಸಚಿವ ಎಂ.ಸಿ ಸುಧಾಕರ್ ಬ್ಯಾಟಿಂಗ್
2019ರಲ್ಲಿ ದ್ವಾರಪಾಲಕ ಫಲಕಗಳನ್ನು ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಚಿನ್ನದ ಲೇಪನಕ್ಕಾಗಿ ಹಸ್ತಾಂತರಿಸಿದಾಗ, ಸುಧೀಶ್ ಕುಮಾರ್ ಅವುಗಳನ್ನು ತಾಮ್ರದ ಫಲಕಗಳಾಗಿ ದಾಖಲಿಸಿದ್ದಾರೆ ಎಂದು ಹೇಳಲಾಗಿದ್ದು, ಆರೋಪಿಗಳು ನಂತರ ಚಿನ್ನದ ಲೇಪನವನ್ನು ಬೇರ್ಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆಡಳಿತ ಅಧಿಕಾರಿ ಬಿ ಮುರಾರಿ ಬಾಬು ಅವರನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದ ದೇವಾಲಯ ನಿರ್ಮಾಣವಾದ ಕಥೆ – ತಿರುಮಲ ದರ್ಶನ ಸಿಗಲಿಲ್ಲವೆಂದು ಸ್ವಂತ ದೇಗುಲ ನಿರ್ಮಿಸಿದ್ದ ಭಕ್ತ!
