LatestNational

ಶಬರಿಮಲೆಗೆ ಸ್ತ್ರೀ ಪ್ರವೇಶಕ್ಕಿಲ್ಲ ಸಹಮತ-ಇಂದಿನಿಂದ ಮತ್ತೆ ಅಯ್ಯಪ್ಪನ ದರ್ಶನ

ತಿರುವನಂತಪುರಂ: ಮಂಡಲ ಪೂಜೆ ಪ್ರಯುಕ್ತ ಇಂದಿನಿಂದ ಶಬರಿಮಲೆ ದೇಗುಲ ತೆರೆಯಲಾಗುತ್ತಿದೆ. ಆದ್ರೆ ಈ ಬಾರಿಯೂ ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಸಿಗೋದು ಅನುಮಾನ.

ಯಾಕಂದ್ರೆ ಸುಪ್ರೀಂ ಕೋರ್ಟ್ ತೀರ್ಪು ಜಾರಿಯ ಬಗ್ಗೆ ನಿನ್ನೆ ನಡೆದ ಸರ್ವ ಪಕ್ಷ ಸಭೆ ವಿಫಲವಾಗಿದೆ. ಶಬರಿಮಲೆಗೆ ಯುವತಿಯರ ಪ್ರವೇಶವನ್ನು ಯಾವುದೇ ಕಾರಣಕ್ಕೂ ತಡೆಯಲಾಗದೆಂಬ ಕೇರಳ ಸಿಎಂ ನಿಲುವನ್ನು ಖಂಡಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಸಭೆ ಬಹಿಷ್ಕರಿಸಿದ್ರು.

ಸುಪ್ರೀಂ ತೀರ್ಪು ಜಾರಿಗೆ ಕಾಲಾವಕಾಶ ಕೋರಲು ದೇವಸ್ವಂ ಮಂಡಳಿಗೆ ಅವಕಾಶವಿದೆ ಎನ್ನುವ ಮೂಲಕ ಕೇರಳ ಸಿಎಂ ಮಹಿಳಾ ದರ್ಶನ ತಡೆಯಲು ಭಕ್ತರಿಗೆ ದಾರಿ ತೋರಿಸಿದ್ದಾರೆ. ಬದಲಾದ ಸರ್ಕಾರದ ಈ ನಡೆ ಬೆನ್ನಲ್ಲೇ ಮಂಡಲ ಪೂಜಾ ಮಹೋತ್ಸವಕ್ಕಾಗಿ ಅಯ್ಯಪ್ಪ ಗರ್ಭಗುಡಿ ಇಂದು ತೆರೆಯಲಿದೆ.

ಒಟ್ಟಿನಲ್ಲಿ ಅಯ್ಯಪ್ಪ ದರ್ಶನಕ್ಕೆ 800 ಮಹಿಳೆಯರು ಆನ್‍ಲೈನ್ ಬುಕಿಂಗ್ ಮಾಡಿರುವುದರಿಂದ ಕ್ಷೇತ್ರದಲ್ಲಿ ಮತ್ತೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಾಗಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸೆಪ್ಟೆಂಬರ್ 28 ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ 4:1 ರಂತೆ ಶಬರಿಮಲೆ ದೇಗುಲಕ್ಕೆ ಎಲ್ಲಾ ಮಹಿಳೆಯ ಪ್ರವೇಶಕ್ಕೆ ಅಸ್ತು ಎಂದು ತೀರ್ಪು ಪ್ರಕಟಿಸಿತ್ತು.

ಸುಪ್ರೀಂ ತೀರ್ಪು ಪ್ರಕಟವಾಗುತ್ತಿದ್ದಂತೆ, ಶಬರಿಮಲೆ ದೇಗುಲ ಪ್ರವೇಶಕ್ಕೆ ಮಹಿಳೆಯರು ಮುಂದಾಗಿದ್ದರು. ಆದರೆ ಅಯ್ಯಪ್ಪ ಸ್ವಾಮಿ ಭಕ್ತರು ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಮಣಿಕಂಠನ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯು ಉಗ್ರ ಸ್ವರೂಪ ಪಡೆದುಕೊಂಡು ಲಾಠಿ ಚಾರ್ಜ್ ಗಳು ಆಗಿದ್ದವು. ಇಷ್ಟಾದರೂ ಭಕ್ತರು ಮಾತ್ರ ಮಹಿಳೆಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲೇ ಇಲ್ಲ. ಅಲ್ಲದೇ ಇದನ್ನು ವಿರೋಧಿಸಿ ಪ್ರಭಾವಿ ನಾಯರ್ ಸಮಾಜ, ಹಿಂದೂಪರ ಸಂಘಟನೆಗಳು, ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published.

Back to top button