ತಿರುವನಂತಪುರಂ: ಮಣಿಕಂಠನ ದರ್ಶನದಿಂದ ನನಗೆ ವರ್ಗಾವಣೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಗೂ ಬಿಎಸ್‍ಎನ್‍ಎಸ್ ಉದ್ಯೋಗಿ ರೆಹನಾ ಫಾತಿಮಾ ಹೇಳಿಕೊಂಡಿದ್ದಾರೆ.
ಶಬರಿಮಲೆ ದೇವಾಲಯವನ್ನು ಪ್ರವೇಶಿಸಲು ಹೋಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರೆಹನಾ ಈ ಹಿಂದೆ ಬಿಎಸ್‍ಎನ್‍ಎಲ್ ಕೊಚ್ಚಿ ಬೋಟಿ ಜೆಟ್ಟಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರನ್ನು ರವಿಪುರಂ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ರೆಹನಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ಯತ್ನ: ರೆಹನಾ ಫಾತಿಮಾ ಇಸ್ಲಾಂನಿಂದ ಉಚ್ಚಾಟನೆ!
Advertisement
Advertisement
ಪೋಸ್ಟ್‌ನಲ್ಲಿ ಏನಿದೆ?:
ಸ್ವಾಮಿ ಶರಣಂ, ನನ್ನ ಮನೆಯ ಪಕ್ಕದಲ್ಲಿರುವ ಶಾಖೆಗೆ ವರ್ಗಾವಣೆ ಮಾಡಿ ಅಂತಾ ಅಧಿಕಾರಿಗಳಿಗೆ 5 ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿದ್ದೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಶಬರಿಮಲೆ ಹತ್ತಿದ ನಂತರ ಆ ಕಾರ್ಯ ಸಿದ್ಧಿಯಾಯಿತು. ಇದ್ದೆಲ್ಲವೂ ಅಯ್ಯಪ್ಪ ಸ್ವಾಮಿಯ ಅನುಗ್ರಹ. ಟ್ರಾಫಿಕ್ ಜಾಮ್ ಸಮಸ್ಯೆ ನಡುವೆಯೇ 6 ಕಿ.ಮೀ. ವಾಹನ ಚಾಲನೆ ಮಾಡಿಕೊಂಡು ಕಚೇರಿಗೆ ಹೋಗಿ ಬರಬೇಕಿತ್ತು. ಆದರೆ ಇನ್ನು ಮುಂದೆ 2 ನಿಮಿಷದಲ್ಲಿ ಮನೆಯಿಂದ ಕಚೇರಿಗೆ ನಡೆದುಕೊಂಡೇ ಹೋಗಬಹುದು. ನನಗೆ ವರ್ಗಾವಣೆಗೆ ಶ್ರಮಿಸಿದ ಅಧಿಕಾರಿಗಳಿಗೆ ಒಳ್ಳೆಯದಾಗಲಿ ಎಂದು ರೆಹನಾ ಫಾತಿಮಾ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವೇಶಿಸಿದ್ರೆ ಶಬರಿಮಲೆ ಗರ್ಭಗುಡಿ ಬಂದ್: ಅರ್ಚಕರ ಪ್ರತಿಭಟನೆಗೆ ಮಣಿದು ಪ್ರವೇಶದಿಂದ ಹಿಂದಕ್ಕೆ ಸರಿದ ಮಹಿಳೆಯರು
Advertisement
https://www.facebook.com/rehanafathima.pathoos/posts/2190505624494620
Advertisement
ಈ ಹಿಂದೆ ಆಗಿದ್ದೇನು?:
ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ವಿರೋಧ ನಡುವೆಯೂ, ಮಹಿಳಾ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಶುಕ್ರವಾರ ಅಯ್ಯಪ್ಪ ದೇವಾಲಯದ ಪ್ರವೇಶಕ್ಕೆ ಮುಂದಾಗಿದ್ದರು. 180 ಪೊಲೀಸರ ಬಿಗಿ ಭದ್ರತೆಯಲ್ಲಿ ದೇವಾಲಯಕ್ಕೆ ಪ್ರವೇಶಕ್ಕೆ 500 ಮೀಟರ್ ದೂರ ಇರುವಾಗ ತಂತ್ರಿಗಳು ಒಂದು ವೇಳೆ ಮಹಿಳೆಯರು ದೇವಾಲಯದ ಪ್ರವೇಶಕ್ಕೆ ಮುಂದಾದರೆ, ದೇವಾಲಯದ ಗರ್ಭಗುಡಿಯನ್ನು ಮುಚ್ಚಿ, ರಾಜಮನೆತನದ ಸುಪರ್ದಿಗೆ ನೀಡುತ್ತೇವೆ ಎಂದು ಎಚ್ಚರಿಸಿದ್ದರು. ಅಯ್ಯಪ್ಪ ಮಾಲಾಧಾರಿಗಳು ಮೆಟ್ಟಿಲಿನಲ್ಲೇ ಪ್ರತಿಭಟನೆ ಮಾಡಿ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದರು. ಮಹಿಳೆಯರು ಪ್ರವೇಶಿಸಿದರೆ ಪರಿಸ್ಥಿತಿ ಕೈ ಮೀರಬಹುದು ಎನ್ನುವುದನ್ನು ಅರಿತ ಪೊಲೀಸರು ಇಬ್ಬರ ಜೊತೆ ಸಂಧಾನ ಮಾಡಿ ದೇವಾಲಯ ತೆರಳದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv