Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶಬರಿಮಲೆ ಚಿನ್ನ ಆಯ್ತು, ಈಗ ತುಪ್ಪ ಹಗರಣ – 35 ಲಕ್ಷ ರೂ. ಅಕ್ರಮ ಆರೋಪದ ತನಿಖೆಗೆ ಕೇರಳ ಹೈಕೋರ್ಟ್ ಸೂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Court | ಶಬರಿಮಲೆ ಚಿನ್ನ ಆಯ್ತು, ಈಗ ತುಪ್ಪ ಹಗರಣ – 35 ಲಕ್ಷ ರೂ. ಅಕ್ರಮ ಆರೋಪದ ತನಿಖೆಗೆ ಕೇರಳ ಹೈಕೋರ್ಟ್ ಸೂಚನೆ

Court

ಶಬರಿಮಲೆ ಚಿನ್ನ ಆಯ್ತು, ಈಗ ತುಪ್ಪ ಹಗರಣ – 35 ಲಕ್ಷ ರೂ. ಅಕ್ರಮ ಆರೋಪದ ತನಿಖೆಗೆ ಕೇರಳ ಹೈಕೋರ್ಟ್ ಸೂಚನೆ

Public TV
Last updated: January 14, 2026 4:00 pm
Public TV
Share
2 Min Read
Ghee
SHARE

ತಿರುವನಂತಪುರಂ: ಶಬರಿಮಲೆ ದೇವಾಲಯ (Sabarimala) ಚಿನ್ನ ಕಳ್ಳತನ ಬಳಿಕ ಇದೀಗ ತುಪ್ಪದ ಹಗರಣವೊಂದು ಬೆಳಕಿಗೆ ಬಂದಿದೆ. ಈ ಬಾರಿ ದೇವಾಲಯದಲ್ಲಿ ಆದ್ಯ ಶಿಷ್ಟ ತುಪ್ಪ (ನೈವೇದ್ಯಕ್ಕೆ ಬಳಸಿದ ನಂತರ ಉಳಿದ ತುಪ್ಪ) ಮಾರಾಟದಲ್ಲಿ 35 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.

ತಿರುವಾಂಕೂರು ದೇವಸ್ವಂ ಬೋರ್ಡ್ ಶಬರಿಮಲೆ ವಿಶೇಷ ಆಯುಕ್ತರ ವರದಿಯ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ.ರಾಜಾ ವಿಜಯರಾಘವನ್ ಮತ್ತು ಕೆ.ವಿ.ಜಯಕುಮಾರ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಈ ಸಂಬಂಧ ವಿಜಿಲೆನ್ಸ್ ಮತ್ತು ಆಂಟಿ-ಕರಪ್ಷನ್ ಬ್ಯೂರೋ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಉನ್ನತ ಅಧಿಕಾರಿಗಳ ತಂಡವನ್ನು ರಚಿಸಿ ಸಂಪೂರ್ಣ ತನಿಖೆ ನಡೆಸಲು ಆದೇಶಿಸಿದೆ.ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಕೇಸ್ – ಆರೋಪಿ ಮಾಸ್ಟರ್ ಪ್ಲ್ಯಾನ್‌ಗೆ ಕೇರಳ SIT ಶಾಕ್

2025 ನ.17ರಿಂದ ಡಿ.26ರವರೆಗೆ ಮತ್ತು 2025ರ ಡಿ.27ರಿಂದ 2026ರ ಜ.2ರವರೆಗಿನ ಅವಧಿಯಲ್ಲಿ ಈ ಅಕ್ರಮ ನಡೆದಿದೆ. ಒಂದು ಪ್ಯಾಕೆಟ್ 100 ಮಿ.ಲೀ. ತುಪ್ಪ 100 ರೂ.ಯಂತೆ ಮಾರಾಟವಾಗುತ್ತದೆ. ಸುಮಾರು 3,52,050 ಪ್ಯಾಕೆಟ್‌ಗಳನ್ನು ತಯಾರಿಸಲಾಗಿತ್ತು. ಇದರಲ್ಲಿ 89,300 ಪ್ಯಾಕೆಟ್‌ಗಳು ಮಾರಾಟವಾದರೂ ಕೇವಲ 75,450 ಪ್ಯಾಕೆಟ್‌ಗಳ ಹಣವನ್ನು ಮಾತ್ರ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದ ಸುಮಾರು 13.68 ಲಕ್ಷ ರೂ. ಅಕ್ರಮವಾಗಿ ಉಳಿದಿದೆ.

ಓರ್ವ ಉದ್ಯೋಗಿ ಸುನಿಲ್ ಕುಮಾರ್ ಪೊಟ್ಟಿ 2025ರ ನ.24ರಿಂದ 30ರ ಅವಧಿಯಲ್ಲಿ 68,200 ರೂ.ಗಳನ್ನು ತಡವಾಗಿ ಜಮಾ ಮಾಡಿದ್ದು, ರಸೀದಿ ನೀಡದೆ ಮಾರಾಟ ಮಾಡಿದ್ದಾರೆ ಎಂದು ಈಗಾಗಲೇ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ವಿಚಾರಣೆ ವೇಳೆ ಕೋರ್ಟ್ ತೀವ್ರವಾಗಿ ಟೀಕಿಸಿದ್ದು, ಕೇವಲ ಎರಡು ತಿಂಗಳಲ್ಲಿ 35 ಲಕ್ಷ ರೂ.ಗಿಂತ ಹೆಚ್ಚು ಹಣ ಅಕ್ರಮವಾದರೆ, ಉಳಿದ ಸಮಯದಲ್ಲಿ ಹಾಗೂ ಇತರ ಆದಾಯ ಮೂಲಗಳಲ್ಲಿ ಎಷ್ಟು ದೊಡ್ಡಮಟ್ಟದ ಭ್ರಷ್ಟಾಚಾರ ಆಗಿರಬಹುದು ಎಂದು ಪ್ರಶ್ನಿಸಿದೆ. ಇದನ್ನು ಗಂಭೀರ ಅಪರಾಧಿಕ ಉಲ್ಲಂಘನೆ ಎಂದು ಹೇಳಿದ ನ್ಯಾಯಾಲಯವು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಸೂಚಿಸಿದೆ. ಒಂದು ತಿಂಗಳೊಳಗೆ ಪ್ರಗತಿ ವರದಿ ಸಲ್ಲಿಸುವಂತೆಯೂ ಆದೇಶಿಸಿದೆ. ತನಿಖೆಯ ಅಂತಿಮ ವರದಿ ಸಲ್ಲಿಸುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಷರತ್ತನ್ನೂ ವಿಧಿಸಿದೆ.ಇದನ್ನೂ ಓದಿ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ರೊದ್ದಂ ಜ್ಯುವೆಲ್ಸ್ ಮೇಲೆ ಕೇರಳ ಎಸ್‌ಐಟಿ ದಾಳಿ

TAGGED:Ghee ScamkeralaKerala HighCourtSabarimalaಕೇರಳಕೇರಳ ಹೈಕೋರ್ಟ್ತುಪ್ಪತುಪ್ಪ ಹಗರಣಶಬರಿಮಲೆ
Share This Article
Facebook Whatsapp Whatsapp Telegram

Cinema news

jayant kaikini bengaluru international film festival
ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು: ಜಯಂತ್‌ ಕಾಯ್ಕಿಣಿ
Cinema Latest Main Post Sandalwood
NK Rajesh Naidu
ʼಸುಖೀಭವ’ ಎನುತ್ತಾ ಸ್ಯಾಂಡಲ್‌ವುಡ್‌ಗೆ ಬಂದ ಡೈರೆಕ್ಟರ್ ಎನ್.ಕೆ ರಾಜೇಶ್ ನಾಯ್ಡು
Cinema Latest Sandalwood Top Stories
Mia Khalifa
Viral | 71 ವರ್ಷದ ʻಮಿಸ್ಟರ್ ಬೀನ್ʼ ಜೊತೆ 32 ರ ಮಿಯಾ ಖಲೀಫಾ ಡೇಟಿಂಗ್‌?
Cinema Latest World
Dhurandhar 2 teaser
Dhurandhar 2 Teaser; ಹಮ್ಜಾ ಆಗಿ ರಣವೀರ್ ಸಿಂಗ್ ಮತ್ತೆ ಮಾಸ್ ಎಂಟ್ರಿ
Bollywood Cinema Latest Top Stories

You Might Also Like

daily horoscope dina bhavishya
Astrology

ದಿನ ಭವಿಷ್ಯ 05-02-2026

Public TV
By Public TV
6 minutes ago
h.d.kumaraswamy nirmala sitharaman
Latest

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿಯಾದ ಹೆಚ್‌ಡಿಕೆ

Public TV
By Public TV
8 hours ago
kolar free helmet
Kolar

ಕೋಲಾರದಲ್ಲಿ 20 ಸಾವಿರ ಹೆಲ್ಮೆಟ್ ಉಚಿತ ವಿತರಣೆ; ಮುಗಿಬಿದ್ದ ಬೈಕ್ ಸವಾರರು

Public TV
By Public TV
8 hours ago
Madikeri Dubare Elephant Camp
Districts

ಕರೆಂಟ್, ಮೂಲಭೂತ ಸೌಕರ್ಯ ಇಲ್ಲ – ದುಬಾರೆ ಸಾಕಾನೆ ಶಿಬಿರದ ಮಾವುತ, ಕಾವಾಡಿಗಳ ಸಮಸ್ಯೆ

Public TV
By Public TV
9 hours ago
assembly session 1
Bengaluru City

ವಿಬಿ ಜಿ ರಾಮ್ ಜಿ ವಿರುದ್ಧದ ನಿರ್ಣಯ ಸದನದಲ್ಲಿ ಅಂಗೀಕಾರ

Public TV
By Public TV
9 hours ago
Namma Metro Greenline
Bengaluru City

ಫೆ.9ರಿಂದ ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ?

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?