ತಿರುವನಂತಪುರಂ: ಶಬರಿಮಲೆ (Sabarimala) ಅಯ್ಯಪ್ಪನ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲೇ ಹುಂಡಿಗೆ 92 ಕೋಟಿ ರೂ. ಹರಿದುಬಂದಿದೆ.
ಈ ಕುರಿತು ಶಬರಿಮಲೆ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ದೇಗುಲಕ್ಕೆ 69 ಕೋಟಿ ರೂ. ಆದಾಯ ಬಂದಿತ್ತು. ಈ ಸಲ ಶೇ.33ರಷ್ಟು ಹೆಚ್ಚಳದೊಂದಿಗೆ 92 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಬೇಸಿಗೆಯಲ್ಲಿ ಟಿಬಿ ಡ್ಯಾಂಗೆ ಕ್ರಸ್ಟ್‌ಗೇಟ್ ಅಳವಡಿಕೆ ನಡೆಯೋದು ಅನುಮಾನ!
ಇದೇ ಅವಧಿಯಲ್ಲಿ ಕಳೆದ ವರ್ಷ ಸಂಗ್ರಹವಾಗಿದ್ದ ಮೊತ್ತಕ್ಕಿಂತ ಇದು 23 ಕೋಟಿ ರೂ. ಅಧಿಕ. ಅದರಲ್ಲಿ 47 ಕೋಟಿ ರೂ. ಅರವಣ ಮಾರಾಟದಿಂದ ಸಂಗ್ರಹವಾಗಿದೆ. ಕಳೆದ ಬಾರಿ ಅರವಣ ಮಾರಾಟದಿಂದ 32 ಕೋಟಿ ರೂ. ಸಂಗ್ರಹವಾಗಿತ್ತು.
ಈ ವರ್ಷ ಯಾತ್ರೆ ಆರಂಭವಾದಾಗಿನಿಂದ ನ.30ರವರೆಗೆ 1.3 ಮಿಲಿಯನ್ ಯಾತ್ರಿಕರು ಭೇಟಿ ನೀಡಿದ್ದಾರೆ ಎಂದು ಮಂಡಳಿ ಹೇಳಿದೆ.ಇದನ್ನೂ ಓದಿ: ಗಗನಕ್ಕೇರಿದ ತರಕಾರಿಗಳ ಬೆಲೆ – ಯಾವುದಕ್ಕೆ ಎಷ್ಟು?

