ತಿರುವನಂತಪುರಂ: ಮಂಡಲ ಪೂಜೆಯ ದಿನದಂದು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ 550 ವಯಸ್ಕ ಮಹಿಳೆಯರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಂಡಲ ಪೂಜೆ ನವೆಂಬರ್ 13ರಂದು ಪ್ರಾರಂಭವಾಗಲಿದ್ದು, ಪೂಜೆ ವೇಳೆ ಅಯ್ಯಪ್ಪನ ದರ್ಶನಕ್ಕೆ ಹೆಸರು ನೋಂದಣಿ ಪ್ರಾರಂಭವಾಗಿದೆ. ಇತ್ತ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ವಿರೋಧದ ನಡುವೆಯೂ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಕ್ಕೆ ಹೆಸರು ನೋಂದಾಯಿಸಿದ್ದಾರೆ.
Advertisement
ಮಂಡಲ ಪೂಜಾ ಕಾರ್ಯಕ್ರಮದ ವೇಳೆ ಶಬರಿಮಲೆ ದೇಗುಲ ತೆರೆಯಲಿದ್ದು, ದರ್ಶನಕ್ಕೆ ಅವಕಾಶವಿರುತ್ತದೆ. ಇದಕ್ಕೆ ಆನ್‍ಲೈನ್ ಮೂಲಕ ಹೆಸರು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಸುಮಾರು 3.1 ಲಕ್ಷ ಜನರು ಹೆಸರು ನೋಂದಾಯಿಸಿದ್ದಾರೆ. ಅವರಲ್ಲಿ 10 ಜನ 10 ವರ್ಷ ಕೆಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರು ಸೇರಿದಂತೆ ಒಟ್ಟು 550 ವಯಸ್ಕ ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಹೆಸರು ನೋಂದಾಯಿಸಿದ್ದಾರೆ.
Advertisement
Advertisement
ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಕೇರಳ ರಾಜ್ಯ ಸರ್ಕಾರ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದೆ. ಹೀಗಾಗಿ ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಮುಂದಾಗುತ್ತಿದ್ದಾರೆ. ಆದರೆ ಇದಕ್ಕೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದು, ಕಳೆದ ಎರಡೂ ಬಾರಿಯೂ ಮಹಿಳೆಯ ಪ್ರವೇಶ ತಡೆಲು ಕೆಲವು ಕಡೆಗಳಲ್ಲಿ ಪ್ರತಿಭಟನೆ ನಡೆದಿದ್ದವು.
Advertisement
ಅಯ್ಯಪ್ಪನಿಗೆ ‘ಶ್ರೀ ಚಿತಿರ ಅಟ್ಟಾ ತಿರುನಾಳ್’ ವಿಶೇಷ ಪೂಜೆ ನಿಮಿತ್ತ ನವೆಂಬರ್ 5 ಹಾಗೂ 6ರಂದು ದೇಗುಲದ ಬಾಗಿಲು ತೆರೆಯಲಾಗಿತ್ತು. ಹೀಗಾಗಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು. ಈ ಬಾರಿಯೂ ಪ್ರತಿಭಟನೆ ಹಾಗೂ ಯಾವುದೇ ಅವಘಡ ಸಂಭವಿಸಬಾರದು ಅಂತಾ ಕೇರಳ ಪೊಲೀಸ್ 100 ಮಹಿಳಾ ಸಿಬ್ಬಂದಿ ಸೇರಿದಂತೆ 1,500 ಜನ ಪೊಲೀಸರನ್ನು ನಿಯೋಜಿಸಿತ್ತು. ಹೊರ ರಾಜ್ಯದಿಂದ ಶಬರಿಮಲೆ ಬರುವ ಭಕ್ತರು ಪರವಾನಿಗೆ ಪತ್ರ ಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದರು.
ಕೇರಳ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಭದ್ರತೆ ಒದಗಿಸಿತ್ತು. ಅಷ್ಟೇ ಅಲ್ಲದೆ ಶಬರಿಮಲೆಯ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದವರನ್ನು ಗುರುತಿಸಲು ಫೇಸ್ ರೆಕಗ್ನೈಸ್ ಸಾಫ್ಟ್‍ವೇರ್ ಬಳಕೆ ಮಾಡಲಾಗಿತ್ತು. ಇದರಿಂದಾಗಿ ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ಆಗಮಿಸಿದ್ದ 7,300 ಜನರಲ್ಲಿ 200 ಜನ ಮಾತ್ರ ನಿಜವಾದ ಭಕ್ತರು ಎನ್ನುವುದನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews