ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (Saalumarada Thimmakka) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ಸಂಜೆ ಮನೆಯಲ್ಲಿ ಕಾಲು ಜಾರಿ ಬಿದ್ದದ್ದ ತಿಮ್ಮಕರನ್ನು ಕೂಡಲೇ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಬಾರಿ ಕಾಲು ಜಾರಿ ಬೆನ್ನು ಸೊಂಟಕ್ಕೆ ನೋವಾಗಿತ್ತು. ಭಾನುವಾರ ಕೂಡ ಮುಖ ತೊಳೆಯಲು ಬಾತ್ ರೂಂಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಕಾರಣ ಸೊಂಟಕ್ಕೆ ಏಟು ಬಿದ್ದಿದೆ. ಇದನ್ನೂ ಓದಿ: ಟೊಮೆಟೋ ಬೆಲೆಯಲ್ಲಿ ಕೊಂಚ ಇಳಿಕೆ- ನಿಟ್ಟುಸಿರು ಬಿಟ್ಟ ಗ್ರಾಹಕರು
ಸದ್ಯ ವೃಕ್ಷಮಾತೆಗೆ ವೈದ್ಯರು ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
Web Stories