ಬೆಂಗಳೂರು: ಸೊಂಟದ ನೋವು ಬಿಟ್ರೆ ಬೇರೆ ಏನೂ ಸಮಸ್ಯೆ ಆಗಿಲ್ಲ ಎಂದು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ (Saalu Marada Thimmakka Health) ಅವರ ಮಗ ಉಮೇಶ್ ಹೇಳಿದ್ದಾರೆ.
ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟ ಅವರು, ಭಾನುವಾರ ಸಂಜೆ ಮನೆಯಲ್ಲಿ ಆಯತಪ್ಪಿ ಬಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ಸೇರಿದೆವು. ಈಗ ಐಸಿಯುವಿನಲ್ಲಿ ಚಿಕಿತ್ಸೆ ನೀಡ್ತಿದ್ದಾರೆ. ಸೊಂಟದ ಮೂಳೆಗೆ ಪೆಟ್ಟಾಗಿದೆ. ಈ ಹಿಂದೆಯೂ ಹಿಪ್‍ಜಾಯಿಂಟ್‍ಗೆ ಪೆಟ್ಟಾಗಿತ್ತು ಎಂದರು.
ಸದ್ಯ ವೈದ್ಯರ ನಿಗಾದಲ್ಲಿದ್ದಾರೆ. ಡಾ. ಸಂದೀಪ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 112 ವರ್ಷವಾಗಿರೋದ್ರಿಂದ ಹೆಚ್ಚಾಗಿ ನೋವಿದೆ. ನಮಗೆ ಸಣ್ಣ ಪುಟ್ಟ ಗಾಯವಾದ್ರೆ ತಡಿಯೋಕೆ ಆಗೋಲ್ಲ. ಅವರಿಗೆ ವಯಸ್ಸು ಅಷ್ಟಾಗಿದೆ, ನೋವು ಜಾಸ್ತಿನೇ ಆಗಿದೆ. ಸೋಂಟದ ನೋವು ಬಿಟ್ರೇ ಬೇರೆ ಏನೂ ಸಮಸ್ಯೆ ಆಗಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ನಮ್ಮ ಸಿಂಹ ರಾಹುಲ್ ಗಾಂಧಿ ಗೆದ್ದಿದ್ದಾರೆ – ಸಂಸತ್ ಸದಸ್ಯತ್ವ ಅನರ್ಹತೆ ವಾಪಸ್ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ
ಕಳೆದ ಬಾರಿ ಕೂಡ ಕಾಲು ಜಾರಿ ಬೆನ್ನು ಸೊಂಟಕ್ಕೆ ನೋವಾಗಿತ್ತು. ಭಾನುವಾರ ಕೂಡ ಮುಖ ತೊಳೆಯಲು ಬಾತ್ ರೂಂಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಕಾರಣ ಸೊಂಟಕ್ಕೆ ಏಟು ಬಿದ್ದಿದೆ.
Web Stories