ಹೈದರಾಬಾದ್: ನಟ ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಆರಂಭದಿಂದಲೂ ಸದ್ದು ಮಾಡುತ್ತಿದ್ದು, ಇದೀಗ ನಟಿ ಶ್ರದ್ಧಾ ಕಪೂರ್ ಅವರ ಸಿನಿಮಾ ಪೋಸ್ಟರ್ ಹಾಕಿ ಅಭಿಮಾನಿಗಳಿಗೆ ಒಂದು ಗುಡ್‍ನ್ಯೂಸ್ ನೀಡಿದ್ದಾರೆ.
ನಟ ಪ್ರಭಾಸ್ ಅವರು, ಶ್ರದ್ಧಾ ಕಪೂರ್ ಗನ್ ಹಿಡುದಿರುವ ಪೋಸ್ಟರ್ ಹಾಕಿ ಸಿನಿಮಾ ಟೀಸರ್ ಬಗ್ಗೆ ತಿಳಿಸಿದ್ದಾರೆ. ‘ಹೇ ಡಾರ್ಲಿಂಗ್ಸ್, ಇದೇ ಜೂನ್ 13 ರಂದು ‘ಸಾಹೋ’ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಜೊತೆಗೆ ಜೂನ್ 14 ರಂದು ಥಿಯೇಟರ್ ಗಳಲ್ಲಿ ಇದನ್ನು ನೀವು ನೋಡಬಹುದು’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
Advertisement
Advertisement
ಸುಜಿತ್ ನಿರ್ದೇಶಿರುವ ಸಿನಿಮಾ ಇದ್ದಾಗಿದ್ದು, ಸುಮಾರು 300 ಕೋಟಿ ಬಜೆಟ್‍ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಯೂವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಿಸಿದೆ.
Advertisement
ನಟ ಪ್ರಭಾಸ್ ಅವರು ಕೆಲವು ದಿನ ಹಿಂದೆಯಷ್ಟೆ ಇನ್‍ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದು, ‘ಸಾಹೋ’ ಸಿನಿಮಾ ಒಂದೊಂದೆ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್‍ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಅಭಿನಯಿಸಿದ್ದಾರೆ.
Advertisement
https://www.instagram.com/p/ByhqMDHHIvX/