ಬೆಂಗಳೂರು: ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ಜೀ ಕನ್ನಡ ವಾಹಿನಿಯು ಪ್ರತಿಭಾವಂತ ಪ್ರತಿಭೆಗಳ ಆಯ್ಕೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್ ನಡೆಸುತ್ತಿದೆ.
ನವೆಂಬರ್ 4 ರಿಂದ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಜನ್ 14 ಹಾಗೂ ಕಾಮಿಡಿ ಕಿಲಾಡಿಗಳು ಸೀಜನ್ 2 ಆಡಿಷನ್ ಆರಂಭವಾಗಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ಆಡಿಷನ್‍ನಲ್ಲಿ ಭಾಗವಹಿಸುವವರು 5 ರಿಂದ 13 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಆದರೆ ಕಾಮಿಡಿ ಕಿಲಾಡಿಗಳು ಆಡಿಷನ್‍ಗೆ ಯಾವುದೇ ವಯೋಮಿಯ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಆಡಿಷನ್‍ನಲ್ಲಿ ಭಾಗವಹಿಸಬಹುದು. ಮೊದಲು ತುಮಕೂರು ಮತ್ತು ಹಾವೇರಿಯಲ್ಲಿ ಆಡಿಷನ್ ಮುಗಿಸಿದ್ದು, ಇಂದು ಕೋಟೆನಾಡು ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.
ಕೋಟೆನಾಡಿನ ಡಾನ್ ಬಾಸ್ಕೋ ಶಾಲೆಯಲ್ಲಿ ಆಡಿಷನ್ ನಡೆಯುತ್ತಿದ್ದು, ಈ ಆಡಿಷನ್‍ಗೆ ಸುಮಾರು 500ಕ್ಕೂ ಹೆಚ್ಚು ಪ್ರತಿಭಾವಂತರ ವಿದ್ಯಾರ್ಥಿಗಳು, ಯುವಕರು ಮತ್ತು ಯುವತಿಯರು ಭಾಗವಹಿಸಿದ್ದರು. ಸ್ಪರ್ಧಿಗಳ ಆಯ್ಕೆಗಾಗಿ ವಿವಿಧ ಬಗೆಯ ಪ್ರಯೋಗಗಳನ್ನು ಮಾಡುವ ಮೂಲಕ ಅವರಲ್ಲಿ ಅಡಗಿರೋ ಕಲೆ, ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಜೀ ಕನ್ನಡ ವಾಹಿನಿ ಮಾಡಿದೆ.
ಸೋಮವಾರ ಶಿವಮೊಗ್ಗ ಮತ್ತು ಕಾರವಾರದಲ್ಲಿ ಆಡಿಷನ್ ನಡೆಯಲಿದ್ದು, ನವೆಂಬರ್ 22 ರಂದು ರಾಮನಗರ ಮತ್ತು ಕೋಲಾರದಲ್ಲಿ ಆಡಿಷನ್ ಕೊನೆಗೊಳ್ಳಲಿದೆ. ಈ ಬಾರಿಯ ಲಿಟ್ಲ್ ಚಾಂಪ್ಸ್ ಮತ್ತು ಕಾಮಿಡಿ ಕಿಲಾಡಿ ಸೀಜನ್ ಗೆ ಪಬ್ಲಿಕ್ ಟಿವಿಯ ಸಹಯೋಗವಿದೆ.