ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್‍ಬ್ಯಾಕ್ ಆರೋಪ ಮಾಡಿದ್ದ ಶಾಸಕ ಸಾ.ರಾ ಮಹೇಶ್‍ಗೆ ಮತ್ತೆ ಭೂಕಂಟಕ ಎದುರಾದಂತೆ ಇದೆ. ಮೈಸೂರು-ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತನಿಖೆಗೆ ಹೊಸ ತಂಡ ರಚಿಸಿ ಭೂಕಂದಾಯ ಇಲಾಖೆ ಆಯುಕ್ತ ಮನಿಷ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.
Advertisement
ಕೇರಗಳ್ಳಿಯ ಸರ್ವೇ ನಂಬರ್ 115, ಯಡಹಳ್ಳಿಯ ಸರ್ವೇ ನಂಬರ್ 69,72, ದಟ್ಟಗಳ್ಳಿಯ ಸರ್ವೇ ನಂಬರ್ 130/3, ಲಿಂಗಾಬುದಿ ಸರ್ವೇ ನಂಬರ್ 10ರಲ್ಲಿ ನಡೆದ ಭೂಒತ್ತುವರಿಗಳ ತನಿಖೆ ನಡೆಸಿ 10 ದಿನದಲ್ಲಿ ವರದಿ ನೀಡಲು ಸೂಚಿಸಿದ್ದಾರೆ. ದಟ್ಟಗಳ್ಳಿ ಮತ್ತು ಲಿಂಗಾಬುದಿ ಸರ್ವೇ ನಂಬರ್ ಗಳಲ್ಲಿ ಸಾರಾ ಮಹೇಶ್ ಒಡೆತನದ ತೋಟ, ಕಲ್ಯಾಣ ಮಂಟಪ ಇದೆ. ಹೀಗಾಗಿ ಸಹಜವಾಗಿಯೇ ಇವುಗಳ ಸರ್ವೇ ಕೂಡ ನಡೆಯಲಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ
Advertisement
Advertisement
ಈ ಬಗ್ಗೆ ಕೆಆರ್.ನಗರದಲ್ಲಿ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಸರ್ಕಾರಿ ಭೂಮಿ ಒತ್ತುವರಿ ಸಂಬಂಧ ತನಿಖೆ ನಡೆಸಲು ಭೂ ದಾಖಲೆಗಳ ಅಧಿಕಾರಿಗಳನ್ನು ನೇಮಕಕ್ಕೆ ಸ್ವಾಗತ. ಸಾಮಾನ್ಯ ಅಧಿಕಾರಿಗಳಿಗೆ ಶಿಕ್ಷೆ ಇದೆ. ಆದರೆ ಇದುವರೆಗೂ ಐಎಎಸ್ ಅಧಿಕಾರಿಗಳಿಗೆ ಶಿಕ್ಷೆ ಆಗಿಲ್ಲ. ಐಎಎಸ್ ಅಧಿಕಾರಿಯ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿಯ ಮುಂದುವರಿದ ಭಾಗ: ರೋಹಿಣಿ ಸಿಂಧೂರಿ
Advertisement
ನಾನೇನು ಈಗ ಚೌಲ್ಟ್ರಿಯನ್ನು ಟ್ರಾಲಿಯಲ್ಲಿ ತಳ್ಳಲು ಆಗಲ್ಲ. ನಾನು ರಾಜಕಾಲುವೆಗೆ 74 ಮೀಟರ್ ಬಿಟ್ಟಿದ್ದೇವೆ. ಗೋಮಾಳ ಆಗಿದ್ರೆ ಅದಕ್ಕೆ ದಾಖಲೆಗಳು ಇವೆ. ನನ್ನ ಜಾಗದಲ್ಲಿ ಯಾವುದೇ ಗೋಮಾಳ ಇಲ್ಲ ಅಂತ ವರದಿ ಕೊಟ್ಟಿದ್ದಾರೆ. ನೀನು ಸರ್ವೆ ಕಮಿಷನರ್ ಆದ ಮೇಲೆ ರಾಜ್ಯದ ಸುಪ್ರೀಮಾ..? ಎಂದು ಆಯುಕ್ತ ಮನಿಶ್ ಮುದ್ಗಲ್ ಗೆ ಸಾರಾ ಪ್ರಶ್ನೆ ಮಾಡಿದ್ದಾರೆ.