ಬೆಂಗಳೂರು: ಕೊಡಗು ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಕೂಡಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ರವರ ಕ್ಷಮೆ ಕೇಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ನಗರದ ಡಾಲರ್ ಕಾಲೋನಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಕ್ರವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ರವರು ಕೊಡಗು ಜಿಲ್ಲೆಗೆ ಬಂದು ಪೂರ್ವ ನಿಗದಿ ಸಭೆಯಲ್ಲಿ ಭಾಗವಹಿಸಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ. ಇಷ್ಟಾದರೂ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕೇಂದ್ರ ಸಚಿವರ ವಿರುದ್ಧ ಮಾತನಾಡಿರುವುದು ಸರಿಯಲ್ಲವೆಂದು ಕಿಡಿಕಾರಿದರು. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ವಿರುದ್ಧ ಸಾರಾ ಮಹೇಶ್ ಗರಂ
Advertisement
Advertisement
ಸಚಿವರು ಈ ಮೂಲಕ ದೇಶದ ಎಲ್ಲಾ ರಾಜ್ಯಸಭಾ ಸದಸ್ಯರಿಗೆ ಅವಮಾನ ಮಾಡಿದ್ದಾರೆ. ಮೊದಲು ಅವರು ಹೇಗೆ ಸಚಿವರಾಗಿದ್ದರೆ ಅನ್ನೋದನ್ನು ಮನವರಿಕೆ ಮಾಡಿಕೊಳ್ಳಬೇಕು. ಅಲ್ಲದೇ ಸಚಿವನಾಗಿದ್ದೇನೆ ಅನ್ನುವ ಹುಮ್ಮಸ್ಸಿನಲ್ಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದನ್ನು ಮೊದಲು ತಿಳಿದುಕೊಂಡು, ಕೂಡಲೇ ಕೇಂದ್ರ ಸಚಿವರಿಗೆ ಕ್ಷಮಾಪಣೆ ಕೋರುವಂತೆ ಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ವಿಚಾರ ಮಾತನಾಡಿದ ಅವರು, ಋಣಮುಕ್ತ ಪ್ರಮಾಣ ಪತ್ರಗಳನ್ನು ಸರ್ಕಾರ ಕೊಡುವುದಿಲ್ಲ. ಅವುಗಳನ್ನು ಬ್ಯಾಂಕುಗಳೇ ನೀಡಬೇಕು. ನನ್ನ ಅನುಭವದಲ್ಲಿ ಸರ್ಕಾರ ಋಣಮುಕ್ತ ಪತ್ರ ನೀಡಿದ ಮಾಹಿತಿ ಇಲ್ಲ. ಸಾಲಮನ್ನಾ ಹೇಗೆ ಕಾರ್ಯರೂಪಕ್ಕೆ ಬರುತ್ತದೆ ಎನ್ನುವುದನ್ನು ನೋಡುತ್ತಿದ್ದೇನೆ. ರೈತರ ಸಾಲಮನ್ನಾ ಹೇಗೆ ರೈತರಿಗೆ ತಲುಪುತ್ತಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.
Advertisement
ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾವನ್ನು ಈವರೆಗೂ ಯಾವುದೇ ಬ್ಯಾಂಕುಗಳು ಸ್ಪಷ್ಟಪಡಿಸಿಲ್ಲ. ಸರ್ಕಾರ ಹೇಳಿರುವ ಹಾಗೆ ತಾನು ನಾಲ್ಕು ಕಂತುಗಳಲ್ಲಿ ಹಣ ಜಮಾ ಮಾಡುವ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ರಾಷ್ಟ್ರೀಯ ಬ್ಯಾಂಕುಗಳ ಸಾಲಮನ್ನಾ ಸ್ವಾಗತ ಮಾಡುತ್ತೇನೆ. ಆದರೆ ಸರ್ಕಾರ ಇದನ್ನು ಯಾವ ರೀತಿ ಕಾರ್ಯರೂಪಕ್ಕೆ ತರುತ್ತದೆ ಎಂಬುದನ್ನು ಗಮನಿಸುತ್ತೇನೆಂದು ಹೇಳಿದ್ರು.
ಇದೇ ವೇಳೆ ಸುದ್ದಿಗಾರರು ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರಸ್ತಾಪಿಸಿದಾಗ, ಸಿದ್ದರಾಮಯ್ಯನವರ ಯಾವುದೇ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲವೆಂದು ನಿರಾಕರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv