ನವದೆಹಲಿ: ಇಸ್ರೋ (ISRO) ನೂತನ ಅಧ್ಯಕ್ಷರಾಗಿ ರಾಕೆಟ್ ವಿಜ್ಞಾನಿ ಎಸ್.ಸೋಮನಾಥ್ ನೇಮಕವಾಗಿದ್ದಾರೆ.
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಆ ಸ್ಥಾನಕ್ಕೆ ಇದೀಗ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಯಾವುದೋ ಊರಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಮಾಡಿ: ಈಶಪ್ರೀಯ ತೀರ್ಥ ಸ್ವಾಮೀಜಿ
Advertisement
2018ರಿಂದಲೂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ್, ಈಗಾಗಲೇ Liquid Propulsion Systems ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
Advertisement
S Somanath appointed as the new Secretary, Department of Space and Chairman, Space Commission
#ISRO pic.twitter.com/TpzGvFUrV0
— All India Radio News (@airnewsalerts) January 12, 2022
Advertisement
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಳೆಯ ವಿದ್ಯಾರ್ಥಿ ಸೋಮನಾಥ್, 1985ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಸೇರಿದರು ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯೋಜನೆಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕುರ್ಚಿಗಾಗಿ ರಾಜಕಾರಣ ಮಾಡೋದು : ಎ. ನಾರಾಯಣ ಸ್ವಾಮಿ
Advertisement
ಜೂನ್ 2015ರಲ್ಲಿ, ಸೋಮನಾಥ್ ಅವರು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC), ತಿರುವನಂತಪುರಂನ ನಿರ್ದೇಶಕರಾಗಿ ನೇಮಕಗೊಂಡರು. ಕೊಲ್ಲಂನ TKM ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದರು ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಅವರು 1985 ರಲ್ಲಿ VSSC ಗೆ ಸೇರಿದರು. ಅವರು ಜೂನ್ 2010 ರಿಂದ 2014 ರವರೆಗೆ GSLV Mk-III ನ ಯೋಜನಾ ನಿರ್ದೇಶಕರಾಗಿದ್ದರು. ಅವರು VSSC ಯಲ್ಲಿನ ‘ಸ್ಟ್ರಕ್ಚರ್ಸ್’ ಘಟಕದ ಉಪ ನಿರ್ದೇಶಕರಾಗಿದ್ದರು.
Ambassador of Belgium to India
H.E. Mr. François Delhaye called on Dr. K. Sivan, Chairman, ISRO/ Secretary, Department of Space at ISRO Headquarters on September 22, 2021.https://t.co/26kqrIEG7V pic.twitter.com/xBde6vXBkb
— ISRO (@isro) September 22, 2021
ಚಂದ್ರಯಾನ-2, GSAT-9 ಯೋಜನೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಸೋಮನಾಥ್ ಅವರನ್ನು ರಾಕೆಟ್ ವಿಜ್ಞಾನಿ ಎಂದು ಕರೆಯಲಾಗುತ್ತದೆ. ಕೊಲ್ಲಂನ ಟಿಕೆಂ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.