ಕನ್ನಡದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಕಾಂಗ್ರೆಸ್ ಗೆ ಸೇರ್ಪಡೆ ಆಗುತ್ತಾರೆ ಎನ್ನುವ ವದಂತಿ ಇತ್ತು. ಈಗದು ನಿಜವಾಗಿದೆ. ಇಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಎಸ್. ನಾರಾಯಣ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತರಾಗಿದ್ದ ನಾರಾಯಣ್, ಜೆಡಿಎಸ್ ಪಕ್ಷ ಸೇರಲು ಒಲವಿಲ್ಲ ಎನ್ನುವುದನ್ನು ಖಚಿತ ಪಡಿಸಿದ್ದಾರೆ. ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ
Advertisement
ಚಂದ್ರ ಚಕೋರಿ ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ ಅವರ ಬ್ಯಾನರ್ ನಿಂದ ಮೂಡಿ ಬಂದ ಹಲವು ಚಿತ್ರಗಳಿಗೆ ಎಸ್. ನಾರಾಯಣ್ ನಿರ್ದೇಶಕರು. ಅಲ್ಲದೇ, ಕುಮಾರಸ್ವಾಮಿ ಅವರ ಚೆನ್ನಾಂಬಿಕೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಬಹುತೇಕ ಚಿತ್ರಗಳಿಗೆ ಇವರು ಸಲಹೆ ಸಹಕಾರ ನೀಡಿದ್ದಾರೆ. ಹಾಗಾಗಿ ಎಸ್.ನಾರಾಯಣ್ ಮತ್ತು ಕುಮಾರಸ್ವಾಮಿ ಅವರ ಸ್ನೇಹ ಗಟ್ಟಿಯಾಗಿತ್ತು. ರಾಜಕೀಯ ವಿಷಯದಲ್ಲಿ ಅದು ಭಿನ್ನ ದಾರಿ ತೋರಿದೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಎದುರು ಅಖಾಡಕ್ಕೆ ಇಳಿದ ಡಾಲಿ ಧನಂಜಯ್
Advertisement
Advertisement
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಎಸ್ ನಾರಾಯಣ್, “ಕಳೆದ ಮೂರು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ದೊಡ್ಡ ಸ್ಟಾರ್ ಗಳ ಜೊತೆ ಕೆಲಸ ಮಾಡಿರುವೆ. ಸಿನಿಮಾ ರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ನನಗೆ ಬಹಳಷ್ಟು ಮಂದಿ ರಾಜಕೀಯ ಯಾಕೆ ಅಂತ ಪ್ರಶ್ನೆ ಮಾಡಿದರು. ಆ ಪ್ರಶ್ನೆ ಹಾಗೆಯೆ ಇರಲಿ ಮುಂದೆ ಉತ್ತರ ಸಿಗುತ್ತದೆ. ನಾನು ಆಯ್ಕೆಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನ. ದೇಶಕ್ಕಾಗಿ ಕಾಂಗ್ರೆಸ್ ತ್ಯಾಗ ಬಲಿದಾನ ಎಲ್ಲವೂ ಕೊಟ್ಟಿದೆ. ಬಡವನಿಗೆ, ದಲಿತನಿಗೆ, ಹಿಂದುಳಿದವರ ಧ್ವನಿ ಈ ಕಾಂಗ್ರೆಸ್ ಜಾತ್ಯಾತೀತ ಸಿದ್ದಾಂತಗಳು ಇಷ್ಟ ಆಯ್ತು ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮಲ್ಲರ ಗುರಿ 2023 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಪಕ್ಷಕ್ಕಾಗಿ ದುಡಿಯುತ್ತೇನೆ, ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ” ಎಂದಿದ್ದಾರೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
Advertisement
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯ ಇಬ್ಬರು ಆಪ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಎಸ್. ನಾರಾಯಣ್ ಹಾಗೂ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಪುರ್ಲೆ ಕಾಂಗ್ರೆಸ್ ಸೇರ್ಪಡೆ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.