ಕೋಲಾರ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅಂಬೇಡ್ಕರ್ ಅವರ ಹೆಸರಿನಲ್ಲಿ ದಲಿತರನ್ನ ಯಾಮಾರಿಸುತ್ತಿದ್ದು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಸಂಸದ ಎಸ್.ಮುನಿಸ್ವಾಮಿ (S. Muniswamy) ಒತ್ತಾಯಿಸಿದ್ದಾರೆ.
ಕೋಲಾರದಲ್ಲಿ (Kolar) ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ದಲಿತರಿಗೆ ಮೀಸಲಾಗಿದ್ದ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ಸಂವಿಧಾನ ಐಕ್ಯತಾ ಸಮಾವೇಶ ಮಾಡಿ ದಲಿತರನ್ನು ಯಾಮಾರಿಸುತ್ತಿದ್ದಾರೆ. ದಲಿತರ ಹಣದಲ್ಲಿ ಕೋಟಿ ಕೋಟಿ ರೂ. ವೆಚ್ಚ ಮಾಡಿ ಸಂವಿಧಾನ ಐಕ್ಯತಾ ಸಮಾವೇಶವನ್ನ ಮಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ದಲಿತರ ಮೇಲೆ ಕಾಳಜಿ ಇಲ್ಲ. ಮತ ಬ್ಯಾಂಕ್‍ಗಾಗಿ ಚುನಾವಣಾ ಸಮಯದಲ್ಲಿ ದಲಿತರ ಹೆಸರು ಹೇಳುತ್ತಾರೆ. ಇನ್ನೂ ದಲಿತ ಸಮಾಜದ ಪರವಾಗಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗುತ್ತೇನೆ. ಈ ಸಮಾವೇಶದಲ್ಲಿಯೇ ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್
Advertisement
Advertisement
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ನಡೆಯುತ್ತದೆ ಎನ್ನುವ ಆತಂಕ ಬಿಜೆಪಿಗೆ (BJP) ಇದೆಯೇ ಎಂಬ ಪ್ರಶ್ನೆಗೆ, ನಮ್ಮ ಪಕ್ಷದಲ್ಲಿ ಆ ರೀತಿ ಯಾವುದೇ ಘಟನೆ ನಡೆಯುವುದಿಲ್ಲ. ಕಾಂಗ್ರೆಸ್ (Congress) ಪಕ್ಷದಲ್ಲಿ ಅನುದಾನ ಸಿಗದೆ ಶಾಸಕರು ಅಸಮಧಾನದಲ್ಲಿ ಇದ್ದಾರೆ. ಹೀಗಾಗಿ ಅವರಲ್ಲೇ ಯಾರಾದರೂ ಅಡ್ಡಮತದಾನ ಮಾಡಬಹುದು. ಇನ್ನೂ ಈ ಕುರಿತು ಆತಂಕ ಇರಬೇಕಾಗಿರುವುದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ. ಕಾಂಗ್ರೆಸ್‍ನಲ್ಲಿ ಇದ್ದು ಕಾಂಗ್ರೆಸ್ ಬಗ್ಗೆಯೇ ಮಾತನಾಡುವವರನ್ನ ನಾವು ನೋಡಿದ್ದೇವೆ ಎಂದಿದ್ದಾರೆ.
Advertisement
Advertisement
ಇನ್ನೂ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಕೇಂದ್ರದ 554 ವಿವಿಧ ಯೋಜನೆಗಳ ಶಂಕುಸ್ಥಾಪನೆಯನ್ನು ವರ್ಚವಲ್ ಮೂಲಕ ಉದ್ಘಾಟಿಸಲಿದ್ದಾರೆ. ಇದರ ಭಾಗವಾಗಿ ಕೋಲಾರ ಜಿಲ್ಲೆಯ ಮಾಲೂರು ಹಾಗೂ ಬಂಗಾರಪೇಟೆ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಆಯಾ ನಿಲ್ದಾಣಗಳಲ್ಲಿ ವರ್ಚವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ