ಡಾ. ಎಸ್.ಎಲ್.ಭೈರಪ್ಪನವರಿಗೂ (S.L.Bhyrappa) ಸಿನಿಮಾ ರಂಗಕ್ಕೂ ಅವಿನಾಭವ ನಂಟಿದೆ. ಅವರ ಅನೇಕ ಕೃತಿಗಳು ಸಿನಿಮಾವಾಗಿವೆ. ಕಿರುತೆರೆಯಲ್ಲಿ ರಾರಾಜಿಸಿವೆ. ಜೊತೆಗೆ ರಂಗಭೂಮಿಯಲ್ಲೂ ದಾಖಲೆ ಬರೆದಿವೆ. ಅನೇಕ ಕಲಾವಿದರು ಭೈರಪ್ಪನವರ ಕಾಂದಬರಿಯನ್ನು ಆಧರಿಸಿದ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವುದು ವಿಶೇಷ.

ಭೈರಪ್ಪನವರ ವಂಶವೃಕ್ಷ ಕೃತಿ ಮೊದಲ ಬಾರಿಗೆ ಸಿನಿಮಾ ಆಯಿತು. ಖ್ಯಾತ ರಂಗಕರ್ಮಿಗಳಾದ ಬಿ.ವಿ.ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಜಂಟಿಯಾಗಿ ಕಾದಂಬರಿಯ ಹೆಸರಿನಲ್ಲೇ ಸಿನಿಮಾ ಮಾಡಿದರು. ಈ ಸಿನಿಮಾದ ಮೂಲಕ ಡಾ.ವಿಷ್ಣುವರ್ಧನ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ವಿಷ್ಣುವರ್ಧನ್ ಈ ಸಿನಿಮಾದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದಾರೆ. ಇದನ್ನೂ ಓದಿ: ʼಲೆಫ್ಟಿಸ್ಟ್‌ಗಳು ಅಪ್ರಾಮಾಣಿಕರು, ದೇಶ ಬೆಳೆಯಬೇಕಾದರೆ ಕ್ಯಾಪಿಟಲಿಸಂ ಅಗತ್ಯʼ
ವಂಶವೃಕ್ಷ ನಂತರ ತಬ್ಬಲಿಯು ನೀನಾದೆ ಮಗನೇ ಕೃತಿಯನ್ನು ಮತ್ತೆ ಸಿನಿಮಾ ಮಾಡಿದ್ದು, ಬಿ.ವಿ.ಕಾರಂತ್ ಮತ್ತು ಗಿರೀಶ್ ಕರ್ನಾಡ್ ಜೋಡಿ. ಈ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟರಾದ ನಸೀರುದ್ಧೀನ್ ಶಾ ಮತ್ತು ಓಂಪುರಿ ನಟಿಸಿದ್ದಾರೆ.

ಭೈರಪ್ಪನವರ ಮತದಾನ ಕೃತಿಯನ್ನು ಸಿನಿಮಾ ಮಾಡಿದ್ದು, ನಿರ್ದೇಶಕ ಟಿ.ಎನ್.ಸೀತಾರಾಮ್. ಈ ಸಿನಿಮಾದಲ್ಲಿ ಅನಂತ್ ನಾಗ್, ತಾರಾ ಮತ್ತು ದೇವರಾಜ್ ಸೇರಿದಂತೆ ದಿಗ್ಗಜ ಕಲಾವಿದರೇ ನಟಿಸಿದ್ದಾರೆ.
ಭೈರಪ್ಪನವರ ಮತ್ತೊಂದು ಕಾದಂಬರಿ ನಾಯಿ ನೆರಳು ಕೃತಿಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಾಯಿ ನೆರಳು ಸಿನಿಮಾದಲ್ಲಿ ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಿರ್ವಹಿಸಿದ್ದಾರೆ. ಅನಂತ್ ನಾಗ್ ಅವರು ಅಭಿನಯ ಶುರು ಮಾಡಿದ್ದು, ಭೈರಪ್ಪನವರ ನಾಯಿ ನೆರಳು ನಾಟಕದಿಂದ ಅನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ

ನಾಲ್ಕು ಕೃತಿಗಳು ಸಿನಿಮಾವಾದರೆ, ಭೈರಪ್ಪನವರ ಗೃಹಭಂಗ ಮತ್ತು ದಾಟು ಕೃತಿಗಳು ಧಾರಾವಾಹಿಯಾಗಿ ಪ್ರಸಾರವಾಗಿವೆ. ಇವರ ಪರ್ವ ಕಾದಂಬರಿಯನ್ನು ಪ್ರಕಾಶ್ ಬೆಳವಾಡಿ ರಂಗರೂಪಕ್ಕೆ ತಂದಿದ್ದಾರೆ. ಭೈರಪ್ಪನವರ ಜೀವನವನ್ನು ಆಧರಿಸಿ ನಿರ್ದೇಶಕ ಪಿ. ಶೇಷಾದ್ರಿ ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಬಾಲಿವುಡ್ ನಟರಾದ ನಸೀರುದ್ಧೀನ್ ಶಾ, ಓಂ ಪುರಿ, ಕನ್ನಡದ ನಟರಾದ ವಿಷ್ಣುವರ್ಧನ್, ಅನಂತ್ ನಾಗ್, ದೇವರಾಜ್, ತಾರಾ, ಮಾಳವಿಕಾ ಅವನಾಶ್ ಸೇರಿದಂತೆ ಅನೇಕ ದಿಗ್ಗಜ ನಟರು ಇವರ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್ ಭಾವುಕ
 


 
		 
		 
		 
		 
		
 
		 
		 
		 
		