ನವದೆಹಲಿ: ದಿ. ರಾಜೀವ್ ಗಾಂಧಿ ಫೌಂಡೇಶನ್ (RGF) ಚೀನಾದಿಂದ ಹಣ ಪಡೆದಿದೆ ಎಂಬ ಬಿಜೆಪಿ (BJP) ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ (Congress), ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಅವರ ಪುತ್ರನಿಗೆ ಚೀನಾ ಫಂಡಿಂಗ್ (China Fund) ಲಿಂಕ್ ಇರುವುದಾಗಿ ಆರೋಪಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera), ಆರ್‌ಜಿಎಫ್ ಚೀನಾದಿಂದ ಹಣವನ್ನು ತೆಗೆದುಕೊಳ್ಳುವ ಮಾಹಿತಿಯು ಸಾರ್ವಜನಿಕ ಡೊಮೇನ್‌ಲ್ಲಿ ಲಭ್ಯವಿದೆ. ಅಲ್ಲದೇ ವಿವಿಧ ಸಂಸ್ಥೆಗಳಿಂದಲೂ ಅನುದಾನ ಪಡೆಯುತ್ತಿದೆ. ಎಸ್.ಜೈಶಂಕರ್ ಅವರ ಪುತ್ರ ಕೆಲಸ ಮಾಡುತ್ತಿರುವ ಸಂಸ್ಥೆಗೆ ಚೀನಾ ರಾಯಭಾರ ಕಚೇರಿಯಿಂದ ಮೂರು ಬಾರಿ ಅನುದಾನ ಬಂದಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: PM ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಅನುಮತಿಸಿದ್ದೇಕೆ?- ಕಾಂಗ್ರೆಸ್
ಅಲ್ಲಿ ಅನುದಾನ ಹೇಗೆ ಏರಿಕೆ ಆಯ್ತು ಅನ್ನೋ ಬಗ್ಗೆ ನಾವು ಯಾವುದೇ ಆರೋಪಗಳನ್ನು ಮಾಡಲಿಲ್ಲ. ಆದ್ರೆ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿದ್ದರಿಂದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (FCRA) ನೋಂದಣಿಯನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ
ಇದೇ ವೇಳೆ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ ಖೇರಾ, ಗಡಿಯಲ್ಲಿನ ಚಟುವಟಿಕೆಗಳ ಬಗ್ಗೆ ಚೀನಾಕ್ಕೆ ಕ್ಲೀನ್ ಚಿಟ್ ನೀಡುವ ಮೂಲಕ ನಮ್ಮ ಸೈನಿಕರ ತ್ಯಾಗವನ್ನು ಏಕೆ ನಿರಾಕರಿಸುತ್ತಿದ್ದಾರೆ? ಎಂಬುದೇ ತಿಳಿಯುತ್ತಿಲ್ಲ. ಮೋದಿಗೆ ಚೀನಾ ಅಂದ್ರೆ ಏಕೆ ಭಯ? ಚೀನಾದ ಮುಂದೆ ಏಕೆ ಬಾಯಿ ತೆರೆಯುತ್ತಿಲ್ಲ? ಏಕೆ ಚೀನಾಕ್ಕೆ ಕ್ಲೀನ್ ಚಿಟ್ ನೀಡಿ ನಮ್ಮ ಸೈನಿಕರ ತ್ಯಾಗವನ್ನು ನಿರಾಕರಿಸುತ್ತಿದ್ದಾರೆ? ಸೈನಿಕರನ್ನೇಕೆ ಅವಮಾನಿಸುತ್ತಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.