ನವದೆಹಲಿ: ನನಗೆ ವೈಯಕ್ತಿಕವಾಗಿ ನೆಚ್ಚಿನ ಆಟಗಾರ ನ್ಯೂಜಿಲೆಂಡ್ (New Zealand) ಕ್ರಿಕೆಟಿಗ ರಾಸ್ ಟೇಲರ್ (Ross Taylor) ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ತಿಳಿಸಿದರು.
ಭಾರತ (India) ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಶ್ಲಾಘಿಸಿದ ಅವರು, ನಮಗೆ ನ್ಯೂಜಿಲೆಂಡ್ ಎಂದಾಗ ಅನೇಕ ವಿಷಯಗಳು ಮನಸ್ಸಿಗೆ ಬರುತ್ತದೆ. ಆದರೆ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಕ್ರಿಕೆಟ್ (Cricket) ಎಂದು ಹೇಳುತ್ತೇನೆ. ಭಾರತ ಹಾಗೂ ನ್ಯೂಜಿಲೆಂಡ್ ದೇಶಗಳು ಕ್ರಿಕೆಟ್ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿಯನ್ನು ಹೊಂದಿವೆ ಎಂದು ಹೇಳಿದರು.
Advertisement
Advertisement
ಭಾರತೀಯರು ಎಂದಿಗೂ ಜಾನ್ ರೈಟ್ ಅವರನ್ನು ಮರೆಯುವುದಿಲ್ಲ ಎಂದ ಅವರು, ಭಾರತೀಯರಿಗೆ ಹೆಚ್ಚು ತಿಳಿದಿರುವ ನ್ಯೂಜಿಲೆಂಡ್ ಆಟಗಾರ ವಿಲಿಯಮ್ಸನ್ ಆಗಿದ್ದಾರೆ. ಅವರು ನಮ್ಮ ದೇಶದ ವಿರುದ್ಧ ಆಡುವುದನ್ನು ಹೊರತು ಪಡಿಸಿ ಹೆಚ್ಚಿನ ಸಮಯ ನಾವು ಅವರನ್ನು ಇಷ್ಟ ಪಡುತ್ತೇವೆ. ಆದರೆ ನನ್ನ ನೆಚ್ಚಿನ ಆಟಗಾರ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಆದರೆ ಅದು ಬೇರೆ ವಿಷಯ ಎಂದು ಈ ವೇಳೆ ತಿಳಿಸಿದರು.
Advertisement
Advertisement
ಭಾರತದ ಮಾಜಿ ಕೋಚ್ ನ್ಯೂಜಿಲೆಂಡ್‌ನ ಜಾನ್ ರೈಟ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ (CSK) ಮುಖ್ಯ ಕೋಚ್ ನೈಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿದರು. ಫ್ಲೆಮಿಂಗ್ 2010, 2011, 2018 ಹಾಗೂ 2021ರಲ್ಲಿ CSK ಟೀಂಗೆ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು. ಈ ಸಮಯದಲ್ಲಿ ಐಪಿಎಲ್‌ನ ಕಿರೀಟವನ್ನು CSK ತಂಡ ತನ್ನದಾಗಿಸಿಕೊಂಡಿತ್ತು. ಇದರ ಜೊತೆಗೆ ಕಿವೀಸ್‌ನ ನಾಯಕ ವಿಲಿಯಮ್ಸನ್ ಸನ್‌ರೈಸರ್ಸ್ ಹೈದರಾಬಾದ್‌ನ ಪ್ರಸ್ತುತ ನಾಯಕರಾಗಿದ್ದಾರೆ ಎಂದರು.