ಬೆಂಗಳೂರು: ಸೌತ್ ಈಸ್ಟ್ ಏಷಿಯನ್ ವಿದ್ಯಾ ಸಂಸ್ಥೆ ಕ್ರಿ.ಶ. 2000ರಲ್ಲಿ ಸ್ಥಾಪನೆಗೊಂಡು ಎಲ್ಲಾ ಅರ್ಹ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ವಿಶಾಲ ದೃಷ್ಟಿ ಕೋನವನ್ನು ಹೊಂದಿದೆ. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಎ. ಕೃಷ್ಣಪ್ಪನವರ ಆಶಯದಂತೆ ಈ ಸಂಸ್ಥೆ ದಶ ದಿಕ್ಕುಗಳಲ್ಲಿ ತನ್ನ ಎಲ್ಲೆ ವಿಸ್ತರಿಸಿ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಾಮೂಹಿಕ ಶಿಕ್ಷಣ ಸಂಸ್ಥೆಯ ಅಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಲಯಗಳು ಈ ಕೆಳಗಿನಂತಿವೆ.
1. ಎಸ್.ಈ.ಏ. ತಾಂತ್ರಿಕ ಮಹಾ ವಿದ್ಯಾಲಯ.
2. ಎಸ್.ಈ.ಏ. ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್.
3. ಎಸ್.ಈ.ಏ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯ.
4. ಎಸ್.ಈ.ಏ. ಕಾಲೇಜ್ ಆಫ್ ನರ್ಸಿಂಗ್.
5. ಎಸ್.ಈ.ಏ. ಕಾನೂನು ಮಹಾವಿದ್ಯಾಲಯ.
6. ಎಸ್.ಈ.ಏ. ಶಿಕ್ಷಣ ಮಹಾವಿದ್ಯಾಲಯ.
7. ಎಸ್.ಈ.ಏ. ಪದವಿ ಪೂರ್ವ ಮಹಾವಿದ್ಯಾಲಯ.
8. ಎಸ್.ಈ.ಏ. ಕೈಗಾರಿಕಾ ತರಬೇತಿ ಕೇಂದ್ರ.
9. ಎಸ್.ಈ.ಏ. ಪ್ರಾಥಮಿಕ ಮತ್ತು ಪ್ರೌಢಶಾಲೆ.
10.ಎಸ್.ಈ.ಏ. ಇಂಟರ್ ನ್ಯಾಷನಲ್ ಶಾಲೆ(ಸಿಬಿಎಸ್‍ಇ)
Advertisement
ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಕಲಿಕಾ ಪರಿಸರದ ಮೂಲಕ ಮಕ್ಕಳನ್ನು ತರಬೇತುಗೊಳಿಸಿ ಭವಿಷ್ಯದ ಎಲ್ಲಾ ಸವಾಲುಗಳನ್ನು ಎದುರಿಸಿ ಗೆಲ್ಲುವಂತೆ ಪ್ರೇರೇಪಿಸುವ ಗುರಿಯೊಂದಿಗೆ ಈ ಸಂಸ್ಥೆ ಮುನ್ನಡೆಯುತ್ತಿದೆ. ಮಕ್ಕಳು ಸಂಶೋಧನಾ ಸಾಮರ್ಥ್ಯ ವನ್ನು ಬೆಳೆಸಿಕೊಂಡು ಪದವಿಯ ಜೊತೆಗೆ ಸರ್ವಸನ್ನದ್ಧರಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡುವಂತೆ ಅಣಿಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ನಡೆಯುತ್ತಿದೆ.
Advertisement
ಎಸ್‍ಈಏ ಶಿಕ್ಷಣ ಸಂಸ್ಥೆಯ ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ:http://seaedu.ac.in/